Recent Posts

Monday, January 20, 2025
ಸುದ್ದಿ

ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು: ಕೋಟಾ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್

ಉಡುಪಿ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕ್ರೌರ್ಯದ ಸಂಕೇತ, ಕನ್ನಡ ವಿರೋಧಿ. ಧರ್ಮಾಂಧನ ಜಯಂತಿ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸವಾಲು ಹಾಕಿ ಟಿಪ್ಪು ಜಯಂತಿ ಆಚರಿಸಿದ್ರು. ಜನರು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು. ಜಯಂತಿ ಆಚರಿಸಿದರೆ ರಾಜ್ಯಾದ್ಯಂತ ವಿರೋಧ ಎದುರಿಸಬೇಕಾಗುತ್ತದೆ.

ರಾಜ್ಯ ಮುಖ್ಯ ಕಾರ್ಯದರ್ಶಿಗೆ ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ ಎಂದು ಪತ್ರ ಬರೆದಿದ್ದೇನೆ. ಅದರಲ್ಲಿ ಯಾವ ಬಿಜೆಪಿ ನಾಯಕರ ಹೆಸರು ಬೇಡ. ಈ ಬಗ್ಗೆ ಉಡುಪಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದೆ. ಟಿಆರ್ ಶಾಮಣ್ಣ ರಸ್ತೆಯನ್ನು ಗಫೂರ್ ರಸ್ತೆ ಬಿಬಿಎಂಪಿ ಬದಲಾಯಿಸಿದ್ದು, ಅಲ್ಪಸಂಖ್ಯಾತರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕವಾಡುತ್ತಿದೆ. ಅಲ್ಪಸಂಖ್ಯಾತರ ಬಗ್ಗೆ ಒಳ್ಳೆ ಅಭಿಪ್ರಾಯ ಇದ್ದರೆ ಸಾಚಾರ್ ವರದಿಗೆ ಗಮನ ಕೊಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಪ್ಪು ಜಯಂತಿ ಮಾಡ್ದೆ ಇದ್ರೆ ಸಿದ್ದರಾಮಯ್ಯ ಬೆಂಬಲ ಹಿಂದೆ ಪಡಿತಾರೆ ಅಂತ ಕುಮಾರಸ್ವಾಮಿ ಗೆ ಹೆದರಿಕೆಯಿದೆ ಎಂದು ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.