ಇತಿಹಾಸದಲ್ಲಿ ಮೊಟ್ಟ ಮೊದಲ ಭಾರಿಗೆ ಗ್ರಾಹರಿಗೋಸ್ಕರ ಮತ್ತು ಗ್ರಾಹಕರ ಸಮಸ್ಯೆ ಪರಿಹಾರಗೋಸ್ಕರ ಸ್ಥಳೀಯ ಮೊಬೈಲ್ ಅಂಗಡಿಯ ಮಾಲೀಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ -ಕಹಳೆ ನ್ಯೂಸ್
ಇತಿಹಾಸದಲ್ಲಿ ಮೊಟ್ಟ ಮೊದಲ ಭಾರಿಗೆ ಗ್ರಾಹರಿಗೋಸ್ಕರ ಮತ್ತು ಗ್ರಾಹಕರ ಸಮಸ್ಯೆ ಪರಿಹಾರಗೋಸ್ಕರ ಸ್ಥಳೀಯ ಮೊಬೈಲ್ ಅಂಗಡಿಯ ಮಾಲೀಕರೆಲ್ಲ ಸೇರಿ ಒಂದು ಪ್ರತಿಭಟನೆ ಮಾಡುವ ಕಾರ್ಯವನ್ನು ಕೈಗೊಂಡಿದ್ದೇವೆ. ನಮ್ಮಲ್ಲಿ ಹಾಗು ಬೇರೆ ಕಡೆ ಮೊಬೈಲ್ ಖರೀದಿಸಿದ ಹಲವು ಗ್ರಾಹಕರು apple ನ IOS UPDATE ನಂತರ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲಾಂಕ್ ಆಗುವಂತಹ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯಿಂದ ನೊಂದ ಗ್ರಾಹಕರು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಅನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅವರ ಉಡಾಫೆ ಉತ್ತರ ಗ್ರಾಹಕರಿಗೆ ಆಘಾತ ಉಂಟು ಮಾಡಿದೆ. ಗ್ರಾಹಕರ ಹಿತದೃಷ್ಟಿಯಿಂದ, ಆಪಲ್ ನ ಮ್ಯಾಪಲ್ ಸರ್ವಿಸ್ ಸೆಂಟರ್ ನ ಕಳಪೆ ಸೇವೆಗಳ ವಿರುದ್ಧ ಪ್ರತಿಭಟನೆ ನಡೆಸುವ ಅನಿವಾರ್ಯತೆ ಉಂಟಾಗಿದೆ.
ಅದಕ್ಕೋಸ್ಕರ ನಾಳೆ ನಾವು ಜ್ಯೋತಿ ಸರ್ಕಲ್ ನಿಂದ ಬೆಳ್ಳಗೆ 11 ಗಂಟೆಗೆ ಹೊರಟು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ನ ಎದುರುಗಡೆಯಿಂದ ಕ್ಲಾಕ್ ಟವರ್ ವರಗೆ ನಮ್ಮ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಕ್ಲಾಕ್ ಟವರ್ ನಲ್ಲಿ ನಾವು ನಮ್ಮ ಬೇಡಿಕೆಗಳನ್ನು apple ಕಂಪೆನಿಯ ಮುಂದೆ ಇಡಲಿದ್ದೇವೆ.
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ ಹಾಗು ಮತ್ತು ಹಲವು ಸಮಸ್ಯೆಗೊಳಗಾದ ಗ್ರಾಹಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಬೆಂಬಲ ನೀಡಬೇಕಾಗಿ ಕೇಳಿ ಕೊಳ್ಳುತ್ತಿದ್ದೇವೆ.
ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಬಂದರೆ Flipkart ಅಥವಾ Amazon ನಂತಹ ವಿದೇಶೀ ಕಂಪನಿಗಳು ಗ್ರಾಹಕರ ಹಿತರಕ್ಷಣೆಗೆ ನಿಲ್ಲುವುದಿಲ್ಲ. ಕೇವಲ ಸ್ಥಳೀಯ ಅಂಗಡಿಗಳು ಮಾತ್ರ ಗ್ರಾಹಕರ ಹಿತರಕ್ಷಣೆಗೆ ಹಾಗು ಅವರ ಅನುಕೂಲಕ್ಕೆ ನಿಲ್ಲುತ್ತೇ ವೆ ಮತ್ತು ಹಾಗೆ ಮುಂದಿನ ಹಬ್ಬದ ಖರೀದಿಯನ್ನು ಗ್ರಾಹಕರು ಆದಷ್ಟು ಸ್ಥಳೀಯ ಅಂಗಡಿಗಳಲ್ಲಿ ವ್ಯಾಪಾರ ನಡೆಸಿ ಸ್ಥಳೀಯರನ್ನು ಬೆಂಬಲಿಸ ಬೇಕಾಗಿ ವಿನಂತಿಸಿ ಕೊಳ್ಳುತ್ತಿದ್ದೇ ವೆ. ಅದೇ ರೀತಿ ಗ್ರಾಹಕರ ಸೇವೆ ಹಾಗು ಬೆಂಬಲಕ್ಕಾಗಿ ನಾವೆಲ್ಲ ಸದಾ ಸಿದ್ಧರಿದ್ದೇ ವೆ ಎಂದು ತಿಳಿಸಲು ನಾಳಿನ ಪ್ರತಿಭಟನೆ ಒಂದು ಉದಾಹರಣೆಯಾಗಿದೆ ಎಂದು ಭಾವಿಸಿದ್ದೇವೆ. ಈ ಪ್ರತಿಭಟನೆ ಕೇವಲ ಒಂದು ಸಾಂಕೇತಿಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಹಾಗು ಸ್ಪಂದನೆ ಸಿಗದ ಪಕ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು DKUMRA ಚೇರ್ ಮನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಮ್, ಪೂರ್ವ ಅಧ್ಯಕ್ಷ ಶೈಲೇಂದ್ರ ಸರಳಾಯ, ಉಪಾಧ್ಯಕ್ಷ ಅಝರ್ ಮೊಹಮದ್, AIMRA ನ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ ಸುವರ್ಣ, ತಿಳಿಸಿದ್ದಾರೆ