Recent Posts

Thursday, November 21, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದ ಬಂಟ್ವಾಳ ಇಂದು ಯಾವುದೇ ರೀತಿಯ ಗೊಂದಲವಿಲ್ಲ-ಕಹಳೆ ನ್ಯೂಸ್

ಬಂಟ್ವಾಳ: ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದ ಬಂಟ್ವಾಳ ಇಂದು ಯಾವುದೇ ರೀತಿಯ ಗೊಂದಲವಿಲ್ಲದೆ ಸಹಜ ಸ್ಥಿತಿಗೆ ಮರಳಿದೆ.
ಸೆ.16 ರಂದು ಸೋಮವಾರ ಭಜರಂಗದಳ- ವಿಎಚ್.ಪಿ ಯವರ ಬಿಸಿರೋಡು ಚಲೋ ಕಾರ್ಯಕ್ರಮದ ಸಂದರ್ಭದಲ್ಲಿ ಬಿಸಿರೋಡಿನ ಸ್ಥಿತಿ ಕೆಲಹೊತ್ತು ವಿಕೋಪಕ್ಕೆ ತಿರುಗಿತ್ತು. ಸುಮಾರು ಮಧ್ಯಾಹ್ನ 12.30 ರ ವರೆಗೂ ಬಿಸಿಯಾಗಿದ್ದ ಬಿಸಿರೋಡು ಮಧ್ಯಾಹ್ನದ ಬಳಿಕ ನಿಧಾನವಾಗಿ ಶಾಂತ ರೀತಿಗೆ ಮಾರ್ಪಾಡಿಗೆ ತೆರಳಿದೆ.
ಇಂದು ಬೆಳಿಗ್ಗೆಯಿಂದ ಜನಸಂಚಾರ ಎಂದಿನAತೆ ಇದ್ದು, ಪೋಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಮು ಸಂಘರ್ಷಕ್ಕೆ ಕಾರಣವಾದ ಆಡಿಯೋ ಒಂದರಿAದ ಆರಂಭವಾದ ಗೊಂದಲ, ಬಂಟ್ವಾಳವನ್ನು ಮತ್ತೆ ಕೋಮು ಗಲಭೆಯತ್ತ ತಿರುಗುತ್ತದೆ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿತ್ತು. ಆದರೆ ಐಜಿಪಿ ಅಮಿತ್ ಸಿಂಗ್ ಹಾಗೂ ಎಸ್.ಪಿ.ಯತೀಶ್ ಎನ್ ಅವರು ಸ್ವತಃ ಸ್ಥಳದಲ್ಲಿ ಮೊಕ್ಕಾಂ ಹೂಡಿ,ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾರ್ವಜನಿಕ ಆಸ್ತಿಪಾಸ್ತಿಗಳಿಗಾಗಲಿ ಅಥವಾ ಪೋಲೀಸ್ ಕರ್ತವ್ಯದ ಮೇಲೆ ಯಾಗಲಿ ಲೋಪವಾಗದಂತೆ ಅತ್ಯಂತ ಶಾಂತಿಯುತ ಪ್ರತಿಭಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದ ಮೇಲೆ ನಿಗಾ:

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಸ್ ಪೆಕ್ಟರ್ ಆನಂತಪದ್ಮನಾಭ ಬಿಸಿರೋಡಿನ ಘಟನೆಯ ಬಳಿಕ ಪೋಲೀಸರು ವ್ಯಾಟ್ಸ್ ಆಪ್, ಟ್ವಿಟರ್, ಪೇಸ್ ಬುಕ್ ,ಇನ್ಸ್ಟ್ ಗ್ರಾಂ ಸಹಿತ ಎಲ್ಲಾ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಅಶಾಂತಿಗೆ ಕಾರಣವಾಗುವ ಅಥವಾ ಕೋಮು ಸಂಘರ್ಷಕ್ಕೆ ಗುರಿಯಾಗುವ ಸಂದೇಶಗಳನ್ನು ಯಾರಾದರೂ ಕಳುಹಿಸಿದರೆ ಅಂತಹವರ ಮೇಲೆ ಪೋಲಿಸ್ ಇಲಾಖೆ ಕ್ರಮಕೈಗೊಳ್ಳುತ್ತದೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳ ಸಹಿತ ಗೊಂದಲ ಮೂಡಿಸುವ ಕೆಲಸಗಳನ್ನು ಮಾಡುವ ಸಂದೇಶಗಳನ್ನು ನಿಗಾವಹಿಸಿ, ತಿಳಿದುಕೊಳ್ಳಲು ಪೋಲೀಸ್ ಇಲಾಖೆ ಪ್ರತ್ಯೇಕವಾಗಿ ತಂಡ ರಚನೆ ಮಾಡಿದೆ. ಅಂತಹವರ ಮೇಲೆ ಕಾನೂನು ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.