ಮೈಸೂರು: ನ. 10ರಂದು ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ಗೆ ರಾಜ್ಯದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟಿಪ್ಪು ಜಯಂತಿ ದಿನ ಪ್ರತಿಭಟನೆ ಮಾಡಿಯೇ ಮಾಡುತ್ತೇವೆ ಸರ್ಕಾರಕ್ಕೆ ಧಮ್ ಇದ್ದರೆ ನಮ್ಮನ್ನು ಬಂಧಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ಈ ಸರ್ಕಾರಕ್ಕೆ ಟಿಪ್ಪುವೇ ಯಾಕೆ ಬೇಕು? ಕಳೆದ ಬಾರಿ ಟಿಪ್ಪು ವಿಚಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ತಟಸ್ಥರಾಗಿದ್ದರು. ಈಗ ಮೈತ್ರಿ ಸರ್ಕಾರವಿರುವುದರಿಂದ ಕಾಂಗ್ರೆಸ್ನ ಕೆಲಸಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.
ಟಿಪ್ಪು ಮೈಸೂರಿನ ಒಡೆಯರ್ ಕುಟುಂಬವನ್ನು ಅಮಾನತಿನಲ್ಲಿ ಇಟ್ಟಿದ್ದ. ಅಂಥ ವ್ಯಕ್ತಿಯ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ರಾಜ್ಯ ಸರ್ಕಾರ ಮತ ಬ್ಯಾಂಕ್ಗಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಬೇಕಿದ್ದರೆ ಅಬ್ದುಲ್ ಕಲಾಂ, ಶಿಶುನಾಳ ಷರೀಫರ ಜಯಂತಿ ಆಚರಣೆ ಮಾಡಲಿ. ಎಂದು ಅಶೋಕ್ ಹೇಳಿದ್ದಾರೆ.