Tuesday, December 3, 2024
ದಕ್ಷಿಣ ಕನ್ನಡಸುದ್ದಿ

ಕೋಟೇಶ್ವರ : ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ- ಕಹಳೆ ನ್ಯೂಸ್

ತೆಕ್ಕಟ್ಟೆ : ಪ್ರಾಪಂಚಿಕವಾಗಿ ನಮ್ಮ ದೇಹ ಮತ್ತು ಮನಸ್ಸು ಇಲ್ಲಿ ಇರಬೇಕಾದರೆ ನಮ್ಮ ತಂದೆ ತಾಯಿಯ ಒಂದೊAದು ಜೀವಕೋಶಗಳನ್ನು ನಾವು ಪಡೆದಿರುತ್ತೇವೆ , ತಂದೆ ತಾಯಿ ಇದ್ದರೆ ಮಾತ್ರ ನಾವೆಲ್ಲಾ. ಈ ಸೃಷ್ಟಿಯ ಆದಿಯಲ್ಲಿ ಅದೆಷ್ಟೋ ಜೀವ ಕಣಗಳಿದ್ದು, ಇಲ್ಲಿ ನಮ್ಮನ್ನು ನಾವು ಹಿಂದಿರುಗಿ ಹುಡುಕಿಕೊಂಡು ಹೋದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಲ್ಲಿ ನಾವು ದೇವರನ್ನು ಕಾಣಬೇಕು ಇದೇ ಸೃಷ್ಟಿಕರ್ತ ವಿಶ್ವಕರ್ಮ. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮ ಎನ್ನುವುದಿದ್ದರೇ ಅದು ವಿಶ್ವಕರ್ಮ ಧರ್ಮ ಎಂದು ಮಂಗಳೂರಿನ ಅಜಲಸ್ ಡಯಾಗ್ನಾಸ್ಟಿಕ್ಸ್ ಇಲ್ಲಿನ ಡಾ| ಚಂದ್ರಯ್ಯ ಆಚಾರ್ಯ ಅವರು ಹೇಳಿದರು.

ಕೋಟೇಶ್ವರ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.) ಹಾಗೂ ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಿವೇ ಗುರು, ಗುರುವಿನಲ್ಲಿ ದೇವರನ್ನು ಕಾಣುತ್ತಿದ್ದೇವೆ . ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಶಾಲಾ ಕಾಲೇಜಿನಲ್ಲಿ ಏನು ಶಿಕ್ಷಣವನ್ನು ಪಡೆಯುತ್ತೇವೆ .ಧಾರ್ಮಿಕವಾಗಿ ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಅದು ನಮ್ಮ ಸಮುದಾಯದ ಮೂಲಕವಾಗಿಯೇ ಪಡೆಯಬೇಕಾಗುತ್ತದೆ. ವಿಶ್ವಕರ್ಮ ಸಮುದಾಯವು ನಮ್ಮ ಧಾರ್ಮಿಕ ಆಚರಣೆ ಹಾಗೂ ವೈಯಕ್ತಿಕ ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ನಮ್ಮ ದೇಹ ಮತ್ತು ಮನಸ್ಸನ್ನು ಹೇಗೆ ನಮ್ಮ ಮುಂದಿನ ಜೀವನಕ್ಕೆ ಅನುವು ಮಾಡಬೇಕು ಎನ್ನುವ ಬಗ್ಗೆ ಧರ್ಮ ಗುರುಗಳ ಮಾರ್ಗದರ್ಶನ ಬಹಳ ಮುಖ್ಯವಾಗಿದೆ . ಈ ನಿಟ್ಟಿನಲ್ಲಿ ಸರಿಯಾದ ಸಮಾಜವನ್ನು ರೂಪಿಸಬೇಕಿದ್ರೆ ಅದರಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿಲ್ಪಿ ವಿಠಲ ಆಚಾರ್ಯ, ಬಸ್ರೂರು ಇವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಚಿತ್ರಕಲಾ ಕಲಾವಿದ ಧನುಷ್ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.), ಕೋಟೇಶ್ವರ ಇದರ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ಹಿಂದಿನಿAದಲೂ ಶ್ರೀ ವಿಶ್ವಕರ್ಮ ಪೂಜೆಯನ್ನು ವಿಶ್ವಕರ್ಮ ಯುವಕ ದಳದವರು ನಡೆಸಿಕೊಂಡು ಬಂದಿದ್ದಾರೆ. ಇಡೀ ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದು, ಈ ನಡುವೆ ಬದಲಾದ ಕಾಲಮಾನಕ್ಕೆ ನಾವುಗಳು ಹೊಂದಿಕೊAಡು ನಮ್ಮ ಅತ್ಯಮೂಲ್ಯವಾದ ಧರ್ಮ ಸಂಸ್ಕೃತಿ ಹಾಗೂ ಕಲೆಗಳನ್ನು ಬೆಳೆಸಿಕೊಂಡು ಹೋಗುವ ಮೂಲಕ ನಾವೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು. ವೇ|ಮೂ| ಪುರೋಹಿತ್ ರೋಹಿತಾಕ್ಷ ಆಚಾರ್ಯ, ಕುಂಭಾಸಿ ಅವರು ಶುಭಾಶಂಸನೆಗೈದರು. ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ಅಧ್ಯಕ್ಷ ಸುರೇಶ ಆಚಾರ್ಯ ಸಾಂತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರವಾರ ಕೊಂಕಣ ರೈಲ್ವೆ ಯ ನಾಗೇಂದ್ರ ಆಚಾರ್ಯ ತಲ್ಲೂರು, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ಗೌರವಾಧ್ಯಕ್ಷ ಸತೀಶ್ ಆಚಾರ್ಯ, ಹೊದ್ರಾಳಿ, ಶ್ರೀ ದೇವಿ ಮಹಿಳಾ ಮಂಡಳಿ, ಕೋಟೇಶ್ವರ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ, ತೆಕ್ಕಟ್ಟೆ , ಕಾರ್ಯದರ್ಶಿ ಪ್ರಕಾಶ ಆಚಾರ್ಯ ಅರಸರಬೆಟ್ಟು , ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ನಿಯೋಜಿತ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2024-26ನೇ ಸಾಲಿನ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಿಸಲಾಯಿತು. ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ ಆಚಾರ್ಯ ಅರಸರಬೆಟ್ಟು ವರದಿ ವಾಚಿಸಿ, ಶಿಲ್ಪಿ ದಿನೇಶ್ ಆಚಾರ್ಯ ಸಾಂತಾವರ ಆಯ ವ್ಯಯ ಪಟ್ಟಿ ಮಂಡಿಸಿ, ಸತೀಶ್ ಆಚಾರ್ಯ ಕುಂಬ್ರಿ, ಸತ್ಯನಾರಾಯಣ ಆಚಾರ್ಯ ದೊಡ್ಡೋಣಿ ಅವರು ಸಮ್ಮಾನಿತರ ಪಟ್ಟಿ ವಾಚಿಸಿ, ಕೆ.ಆರ್.ರಾಘವೇಂದ್ರ ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿ, ಗಣೇಶ್ ಆಚಾರ್ಯ ಕುಂಬ್ರಿ ನಿರೂಪಿಸಿ, ಜೀವಿ ವೆಂಕಟೇಶ್ ಆಚಾರ್ಯ ವಂದಿಸಿದರು.

ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವವು ವೇ| ಮೂ| ಪುರೋಹಿತ್ ರೋಹಿತಾಕ್ಷ ಆಚಾರ್ಯರ ಪ್ರ‘ನ ಆಚಾರ್ಯತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.