ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರಿಗೆ ಪ್ರಥಮ ಸ್ಥಾನ- ಕಹಳೆ ನ್ಯೂಸ್
ಪುತ್ತೂರು: ದಕ್ಷಿಣ ಕನ್ನಡದ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಸಾಯನಶಾಸ್ತ್ರ ವಿಷಯ ಸಂಬಂಧಿ ವಿವಿಧ ಸ್ಪರ್ಧೆಗಳಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಲವು ಬಹುಮಾನ ಗಳಿಸಿದ್ದಾರೆ.
ಪುತ್ತೂರು ಕರ್ಕುಂಜದ ಬಿ ಕೆ ಸುರೇಶ್ ಮತ್ತು ಜಯಂತಿ ಎಸ್ ದಂಪತಿಯ ಪುತ್ರಿ ಕೆ ಎಸ್ ಮನೀಷಾ ‘ಇಂಟರ್ಯಾಕ್ಟಿವ್ ಕೆಮಿಸ್ಟ್ರಿ’ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿಟ್ಲದ ಜಗದೀಶ್ ವಿ ಮತ್ತು ಸಂಗೀತಾ ದಂಪತಿಯ ಪುತ್ರ ಚಿನ್ಮಯ್ ವಿ ಜೆ ‘ಡಾಕ್ಯುಮೆಂಟರಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪುತ್ತೂರು ದರ್ಬೆಯ ಶಿವರಾಮ್ ಆಳ್ವ ಮತ್ತು ಸೀಮಾ ಆಳ್ವ ದಂಪತಿಯ ಪುತ್ರಿ ವರ್ಷಿಣಿ ಆಳ್ವ ಮತ್ತು ಸುಬ್ರಹ್ಮಣ್ಯದ ಕೆ ಸತೀಶ ಕಲ್ಲೂರಾಯ ಮತ್ತು ರೇಣುಕಾ ದಂಪತಿಯ ಪುತ್ರಿ ಧನ್ಯಶ್ರೀ ಕೆ ‘ಕೆಮ್ ರಂಗೋಲಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ದ ಕ ಜಿಲ್ಲೆಯ 30 ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.