ಸಿದ್ದವಾಗ್ತಿದೆ ಆರ್ ಎಸ್‍ಎಸ್ ಹೊಸ ಪ್ಲಾನ್, ಸುಪ್ರೀಂ ಆದೇಶಕ್ಕಿಂತ ಮೊದಲೇ ಧರ್ಮಾದೇಶ: ಭಯ್ಯಾಜಿ ಜೋಶಿ – ಕಹಳೆ ನ್ಯೂಸ್
: ಇನ್ನೇನು 2019ರ ಚುನಾವಣೆ ಹತ್ತಿರ ಬರಲಿದೆ. ಹಾಗೇ ಕಮಲದ ಪ್ರತಿಷ್ಠೆಯಾಗಿರೋ ರಾಮಮಂದಿರದ ಕೂಗು ಜಾಸ್ತಿಯಾಗ್ತಾನೆ ಇದೆ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಸಂಘಟನೆಗಳು ರಾಮಮಂದಿರ ನಿರ್ಮಾಣಕ್ಕೆ ಒತ್ತಾಯ ನಡೆಸುತ್ತಿದ್ದು ಮತ್ತೆ 1992ರ ಹೋರಾಟ ಪರಿಸ್ಥಿತಿ ತಲೆದೂಗುತ್ತಾ ಎಂಬುವುದು ಈಗ ಸದ್ಯದ ಪ್ರಶ್ನೆಯಾಗಿದೆ. ಈ ವಿಷ್ಯಕ್ಕೆ ಈಗ ಇನ್ನೊಂದು ಟ್ವಿಸ್ಟ್ ಸಿಕ್ಕಿದ್ದು, ಆರ್ ಎಸ್‍ಎಸ್‍ನ ಮುಖ್ಯ ಕಾರ್ಯದರ್ಶಿ ಭಯ್ಯಾಜಿ ಜೋಶಿ ಹೊಸ ಬಾಂಬ್ ಸಿಡಿಸಿದ್ದು ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ….
ಕಳೆದ ಮೂರು ದಶಕಗಳಿಂದ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಾ ಇವೆ. ಧರ್ಮ ಸೂಕ್ಷ್ಮದ ವಿಚಾರ ಆಗಿರೋದ್ರಿಂದ ವಿಚಾರಣೆಯನ್ನು ಸರಿಯಾಗಿ ಇತ್ಯರ್ಥಗೊಳಿಸುವಂತೆ ಸುಪ್ರಿಂ ಕೋರ್ಟು ಅರ್ಜಿ ವಿಚಾರವನ್ನು ಮುಂದೂಡಿದೆ. ಇದರಿಂದಾಗಿ ಆರ್ ಎಸ್ ಎಸ್ ಸೇರಿದಂತೆ ಹಲವು ಸಂಘಟನೆಗಳು ಸುಪ್ರೀಕೋರ್ಟುನ ನಿಲುವಿಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಬೇಗ ಇತ್ಯರ್ಥವಾಗುವಂತೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
2019ರ ಚುನಾವಣೆ ಸಮೀಪಿಸುದ್ದಿಂತಯೇ ರಾಮಮಂದಿರದ ನಿರ್ಮಾಣದ ಕೂಗು ಹೆಚ್ಚಾಗ್ತಾ ಇದೆ. ಬಾಬ್ರಿ ಮಸೀದಿ ಮತ್ತು, ಆಯೋಧ್ಯೆಯ ಕುರಿತಂತೆ ಪ್ರಮುಖ ನಾಯಕರುಗಳು ಹಠ ಬಿಡ್ತಿಲ್ಲ. ಒಂದು ಕಡೆಯಿಂದ ಬಿಜೆಪಿಯ ನಾಯಕರುಗಳು ರಾಮಮಂದಿರ ನಿರ್ಮಾಣ ಆಗ್ಲೇ ಬೇಕೆಂದು ಟೊಂಕ ಕಟ್ಟಿ ನಿಂತಿರುವುದು ಆನೆ ಬಲ ಸಿಕ್ಕಿದಂತಿದೆ.
ಇನ್ನು ಆರ್‍ಎಸ್‍ಎಸ್‍ನ ಮುಖ್ಯ ಕಾರ್ಯದರ್ಶಿ ಹೊಸ ಏಟನ್ನೇ ನೀಡಿದ್ದಾರೆ. ಸುಪ್ರೀಂ ಕೋರ್ಟು ಶೀಘ್ರವಾಗಿ ತೀರ್ಪನ್ನು ನೀಡದೇ ಇದ್ರೆ ತಮ್ಮ ನಿಲುವು ಏನೆಂಬುವುದನ್ನು ಹೇಳಿಕೊಂಡ್ರು.
ದೀಪಾವಳಿ ಮೊದಲು ನಾವು ಸಿಹಿ ಕೇಳ್ತೇವೆ ಅಂತ ಅಂದ್‍ಕೊಂಡಿದ್ವಿ, ಆದ್ರೆ ಸುಪ್ರೀಂ ಕೋರ್ಟಿನ ನಿರ್ಧಾರ ಬೇಸರ ಮೂಡಿಸಿದೆ. ರಾಮನು ಎಂದೆಂದಿಗೂ ನಮ್ಮ ಹೃದಯದಲ್ಲಿರ್ತಾರೆ ಎಂದು ಹೇಳಿಕೊಂಡ್ರು.
ಇನ್ನು ಲಖ್ನೌನಲ್ಲಿ ನಡೆದ ಧರ್ಮಾದೇಶದಲ್ಲಿ ದೀಪಾವಳಿಗಿಂತ ಮೊದಲೇ ರಾಮ ಮಂದಿರ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂಬ ಕೂಗು ಕೇಳಿ ಬಂದವು. ದೇಶದ ನಾನಾ ಭಾಗಗಳ ಮೂರು ಸಾವಿರ ಸಂತರು ಭಾಗವಹಿಸಿದ್ರು. ಇದೇ ವೇಳೆ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಒತ್ತಾಯಿಸಿದ್ರು.. ಈ ಧರ್ಮಾದೇಶದಲ್ಲಿ ಮಾತನಾಡಿದ ರಂಭಾದ್ರಾಚಾರ್ಯ ಸರ್ಕಾರ ಬೀಳಲಿ ಅಥವಾ ಏನೇ ಆಗ್ಲಿ ರಾಮ ಮಂದಿರ ನಿರ್ಮಾಣ ಶತ ಸಿದ್ದ ಎಂಬುದಾಗಿ ಹೇಳಿಕೊಂಡ್ರು.
ಒಟ್ಟಾಗಿ ರಾಮಮಂದಿರ ನಿರ್ಮಾಣದ ವಿಷಯ ರಾಜಕೀಯ ವಲಯವನ್ನು ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದೆ. ಅಯೋದ್ಯೆಯ ವಿಚಾರದಲ್ಲಿ 1992 ನಡೆದ ತೀವ್ರ ಹೋರಾಟ ಎಲ್ಲೆಡೆ ಭಯದ ವಾತವರಣ ಇಂದಿಗೂ ನಡುಕ ಹುಟ್ಟಿಸುತ್ತೆ. ಬಿಜೆಪಿಯ ನಾಯಕ ಲಾಲ್‍ಕೃಷ್ಣ ಅಡ್ವಾನಿ ನೇತೃತ್ವದ ಈ ಹೋರಾಟವು ಆಯೋಧ್ಯೆಯ ವಿಚಾರದಲ್ಲಿ ಹೊಸ ತಿರುವನ್ನೇ ಪಡೆದುಕೊಂಡಿತ್ತು. ಮತ್ತೆ ಈ ಘಟನೆ ಮರುಕಳಿಸಿದ್ರೆ ಇದು ಸರ್ಕಾರಕ್ಕೆ ಎಫೆಕ್ಟ್ ಆಗೋದಂತೂ ಪಕ್ಕಾ. ಈ ಸಮಸ್ಯೆಯು ಮೊದಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದ್ದು ಸಮಸ್ಯೆ ಬಗೆಹರಿಯುತ್ತಾ ಎಂಬುವುದು ಸದ್ಯದ ಪ್ರಶ್ನೆ.