Friday, November 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಹಿಂದಿ ದಿವಸ್ ಆಚರಣೆ-ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶನಿವಾರ ಹಿಂದಿ ದಿವಸ್ ಆಚರಣೆ ನಡೆಯಿತು.
ಪ್ರಸಿದ್ಧ ಸಾಹಿತಿಗಳ ವೇಷ ಧರಿಸಿ ಬಂದು ಅವರನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ವಿಶಿಷ್ಟವಾದ ಕರ‍್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ಉಪಪ್ರಾಂಶುಪಾಲೆ ಸುಜನಿ ಬರ‍್ಕರ್ ಅವರು ಹಿಂದಿ ದಿವಸ್ ದಂದು ಕೊಡಮಾಡುವ ಪ್ರಶಸ್ತಿಗಳ ಬಗ್ಗೆ ಹೇಳುತ್ತಾ ಭಾಷಾ ವೈಶಿಷ್ಟ್ಯವನ್ನು ತಿಳಿಸಿದರು. ಹಿಂದಿ ಶಿಕ್ಷಕಿ ಕುಸುಮ ಮಾತನಾಡಿ ಸಂತ ಕಬೀರರ ದೋಹೆಯ ಮೌಲ್ಯವನ್ನು ತಿಳಿಸಿಕೊಟ್ಟರು.

ಹತ್ತನೇ ತರಗತಿಯ ಸಾರಿಕಾ ಹಿಂದಿ ಭಾಷೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಹತ್ತನೇ ತರಗತಿಯ ಶ್ರೀಹರಿ ಸ್ವತಃ ರಚಿಸಿದ ಶಾಯರಿಯನ್ನು ಪ್ರಸ್ತುತ ಪಡಿಸಿದರು. ಹತ್ತನೇ ತರಗತಿ ವಿದ್ಯರ‍್ಥಿಗಳು, ಇತರ ವಿದ್ಯರ‍್ಥಿಗಳಿಗೆ ಹಿಂದಿ ಟಂಗ್ ಟ್ವಿಸ್ಟರ್ ಹಾಗೂ ಒಗಟುಗಳ ಸ್ರ‍್ಧೆ ನಡೆಸಿ ಬಹುಮಾನ ವಿತರಿಸಿದರು.
ಏಳನೇ ತರಗತಿಯ ಅನುಶ್ರೀ ಪ್ರರ‍್ಥಸಿ, ಹತ್ತನೇ ತರಗತಿಯ ಅದಿತಿ ರೈ ಹಾಗೂ ಒಂಬತ್ತನೇ ತರಗತಿಯ ವಿದ್ಯಾ ಪೈ ಕರ‍್ಯಕ್ರಮವನ್ನು ನರ‍್ವಹಿಸಿದರು, ಹತ್ತನೇ ತರಗತಿಯ ಚರಿಷ್ಮಾ ಸ್ವಾಗತಿಸಿದರು, ಧನ್ವಿತ್ ವಂದಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು