Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯ ವಿಸ್ತರಣಾ ಕಟ್ಟಡ ‘ಅಭಯ’ ಉದ್ಘಾಟನೆ; ಸಂಜೆ ಲೆಕ್ಕಕ್ಕೆ ಸಿಗದ ಲೆಕ್ಕಪರಿಶೋಧಕರ ವರದಿ -ಕಹಳೆ ನ್ಯೂಸ್

ಪುತ್ತೂರು: ಪೆರುವಾಯಿ ವ್ಯವಸಾಯ ಸೇವಾ ಸಂಘದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಭಾನುವಾರದಂದು ಮಾಣಿಲ ಶಾಖೆಯ ವಿಸ್ತರಣಾ ಕಟ್ಟಡ ಅಭಯ ಇದರ ಉದ್ಘಾಟನಾ ಸಮಾರಂಭ ನಡೆಯಿತು.

ಇದಾದ ಬಳಿಕ ಸಂಘದ ಸಭೆ ಆರಂಭಗೊAಡು ಲೆಕ್ಕಪತ್ರಗಳ ಮಂಡನೆ ನಡೆಯುತ್ತಿದಂತೆ ಕೆಲ ಸದಸ್ಯರು ಒಬ್ಬರ ಹಿಂದೆ ಇನ್ನೊಬ್ಬರಂತೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ವೇಳೆ ಪೆರುವಾಯಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಗೀತಾನಂದ ಶೆಟ್ಟಿ ಜಿ ಅವರು ಗಲಿಬಿಲಿಗೊಂಡಿದ್ದು, ಸದಸ್ಯರ ಸಾಲು ಸಾಲು ಪ್ರಶ್ನೆಗಳಿಗೆ ಗಪ್ ಚುಪ್ ಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯವಾಗಿ 01/04/2023 ರಿಂದ 31/03/2024ರ ವರೆಗಿನ ಜಮಾ ಖರ್ಚಿನಲ್ಲಿ ಅನೇಕ ಡಬಲ್ ಎಂಟ್ರಿಗಳು ಕಂಡುಬAದಿದೆ. ಅಮಾನತು ಮೂಲ ಮತ್ತು ಖರ್ಚುಗಳ ಬಗ್ಗೆ ಸರಿಯಾದ ದಾಖಲೆಗಳನ್ನ ಮಹಾಸಭೆಯಲ್ಲಿ ಮಂಡಿಸದಿರುವುದು, 24/25ರ ಅಂದಾಜು ಬಜೆಟ್ ನ ಟೋಟಲ್ ವೆಚ್ಚಗಳಲ್ಲಿ ವ್ಯತ್ಯಾಸ, ಅಪೂರ್ಣವಾದ ಮಹಾಸಭೆ ವರದಿ ಇವೆಲ್ಲದರ ಬಗ್ಗೆ ಅಧ್ಯಕ್ಷರ ಮುಂದೆ ಸದಸ್ಯರು ಪ್ರಶ್ನೆಗಳ ಸುರಿಮಳೆಯೇ ನಡೆಯಿತು.

ಇದರ ಜೊತೆಗೆ ಮಹಾಸಭೆ ವರದಿಯಲ್ಲಿ ಅಜೆಂಡಾ, ಆಮಂತ್ರಣ, ಅಧ್ಯಕ್ಷ, ಕಾರ್ಯ ನಿರ್ವಹಣಾ ಅಧಿಕಾರಿಯ ಹೆಸರು ಇಲ್ಲದಿರುವುದರ ಬಗ್ಗೆಯೂ ಗಂಭೀರ ಆರೋಪಗಳನ್ನ ಮಾಡಿದರು. ಇನ್ನು ಕೆಲಕಾಲ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಈ ನಡುವೆ ಲೆಕ್ಕಪರಿಶೋಧಕರ ವರದಿಯ ಸಂಕ್ಷಿಪ್ತ ಮಾಹಿತಿ ಕೂಡಾ ವರದಿ ಪುಸ್ತಕದಲ್ಲಿ ದಾಖಲಾಗದೇ ಇರುವುದುದಕ್ಕೆ ಭಾರೀ ಆಕ್ಷೇಪಗಳು ಕಂಡುಬAತು. ಈ ಎಲ್ಲಾ ಆಕ್ಷೇಪಗಳಿಗೆ ಉತ್ತರ ಕೊಡಲಾಗದೆ ಅಧ್ಯಕ್ಷರು ಎದ್ದು ನಿಂತು ರಾಜಕೀಯ ಮಾತನಾಡಲು ಆರಂಭಿಸಿದರು.

 

ಈ ಸಂದರ್ಭದಲ್ಲಿ ಸಭೆಯಲ್ಲಿ ಗೊಂದಲಮಯ ವಾತಾವರಣ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ನಡುವೆ ಕೆಲ ಆರೋಪಕ್ಕೆ ಕಾರ್ಯ ನಿರ್ವಹಣಾ ಅಧಿಕಾರಿಯ ಮೇಲೆ ಗೂಬೆ ಕೂರಿಸಿದ ಅಧ್ಯಕ್ಷರ ಮಾತಿಗೆ ಕೆಲ ಸದಸ್ಯರು ನೀವು ಒಬ್ಬರ ತಲೆ ಮೇಲೆ ಆರೋಪ ಮಾಡಬೇಡಿ, ಈ ಎಲ್ಲಾ ಅವ್ಯವಹಾರಗಳಿಗೆ ನಿರ್ದೇಶಕರು, ಅಧ್ಯಕ್ಷರು ಕೂಡ ಹೊಣೆಯಾಗಲಿದ್ದೀರಿ ಎಂದು ದೂರಿದರು. ಇನ್ನು ಪೆರುವಾಯಿ ವ್ಯವಸಾಯ ಸೇವಾ ಸಂಘದಲ್ಲಿ ಇತರ ಖರ್ಚುಗಳು ಎಂದು 787987 ಅಂತ ಹಾಕಿದ್ದಾರೆ. ಸ್ಥಿರಾಸ್ತಿ ಖರ್ಚು 178619 ಎಂದು ಹೇಳಿದ್ದಾರೆ. ಇದೆಲ್ಲವೂ ಯಾವೂದಕ್ಕೆ ವಿನಿಯೋಗ ಆಗಿದೆ ಎಂಬುದಕ್ಕೆ ಅವರಲ್ಲಿ ಸಮರ್ಪಕ ಉತ್ತರವೇ ಇರಲಿಲ್ಲ ಎಂದು ಸದಸ್ಯರು ಆರೋಪ ಮಾಡಿದ್ದಾರೆ. ಇನ್ನು ಅದೆಷ್ಟೋ ಗ್ರಾಮೀಣ ಭಾಗದ ಜನತೆ ಇದರಲ್ಲಿ ಸದಸ್ಯರಾಗಿದ್ದಾರೆ. ಹೀಗಿರುವಾಗ ಸಂಘದಲ್ಲಿ ಇಂತಹ ಅವ್ಯವಹಾರ ನಡೆದರೆ ಅವರ ಗತಿ ಏನು ಎಂಬುದನ್ನ ಪ್ರಶ್ನೆ ಮಾಡಿದ್ದಾರೆ.

ಯಾರೋ ರಾಜಕೀಯ ಪ್ರೇರಿತ ಮೂವರು ವಿನಾಕಾರಣ ಗದ್ದಲ ಎಬ್ಬಿಸಿದ್ದಾರೆ. ನಮ್ಮ ವ್ಯವಸಾಯ ಸೇವಾ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಖರ್ಚು ವೆಚ್ಚಗಳ ಬಗ್ಗೆ ಸಂಕ್ಷಿಪ್ತವಾಗಿ ವರದಿ ಮಂಡನೆ ಮಾಡಿದ್ದೇವೆ. ಹೊಸ ಕಟ್ಟಡ ವಿಸ್ತರಣೆಗೆ ಏನೆಲ್ಲ ಆಗಿದೆ ಅದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇವೆ.
ಅಧ್ಯಕ್ಷರು, ಪೆರುವಾಯಿ ವ್ಯವಸಾಯ ಸೇವಾ ಸಂಘ