Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಂಟುಕುಡೇಲು: ಮನೆಯ ಹಿಂಬಾಗಿಲು ಮುರಿದು ಚಿನ್ನಾಭರಣ ಕಳವು-ಕಹಳೆ ನ್ಯೂಸ್

ವಿಟ್ಲ: ಮನೆಯ ಹಿಂಬಾಗಿಲು ಮರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ನಿವಾಸಿ ಲೀಲಾ ಕೆ. ದೂರುದಾರರಾಗಿದ್ದು, ಸೆ.17ರಂದು ಬಂಟ್ವಾಳ ವಿಟ್ಲಪಡ್ನೂರು ಗ್ರಾಮದ ಕುಂಟುಕುಡೆಲು ಎಂಬಲ್ಲಿರುವ ನನ್ನ ಮನೆಯ ಬಾಗಿಲುಗಳನ್ನು ಭದ್ರಪಡಿಸಿ, ಮಗಳೊಂದಿಗೆ ಕೊಡಂಗಾಯಿಗೆ ತೆರಳಿ ಮಧ್ಯಾಹ್ನ ವೇಳೆ ಹಿಂತಿರುಗಿ ನೋಡಿದಾಗ. ಮನೆಯ ಹಿಂಭಾಗದ ಬಾಗಿಲನ್ನು ಯಾರೋ ಕಳ್ಳರೂ ಮುರಿದು ಒಳಪ್ರವೇಶಿಸಿರುವುದು ಕಂಡುಬAದಿತ್ತು. ಕೂಡಲೇ ಮನೆಯೊಳಗಡೆ ಪ್ರವೇಶಿಸಿ ನೋಡಿದಾಗ ಮನೆಯ ಕೋಣೆಯೊಂದರ ಕಪಾಟಿನ ಒಳಗಡೆ ಇರಿಸಿದ್ದ, ಒಟ್ಟು 36 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 1,46,000 ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು