ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಅಟ್ಟೆಪದವು ಸರಕಾರಿ ಜಾಗದ ವಿವಾದವು ಕಾಂಗ್ರೆಸ್ ನ ರಾಜಕೀಯ ಪ್ರೇರಿತ :- ಪ್ರವೀಣ್ ಆಳ್ವ-ಕಹಳೆ ನ್ಯೂಸ್
ಮಂಗಳೂರು : ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಅಟ್ಟೆಪದವು ಸರ್ವೇ ನಂಬ್ರ 35 ರಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಜಾಗದ ವಿವಾದವು ಕಾಂಗ್ರೆಸಿನ ರಾಜಕೀಯ ಪ್ರೇರಿತವಾಗಿದ್ದು ಸತ್ಯ ವಿಚಾರ ಏನೆಂದರೆ , 2022 ರಲ್ಲಿ ಈಗಿನ ಸ್ವಯಂ ಘೋಷಿತ ಕಾಂಗ್ರೆಸ್ ಮುಖಂಡ ದಯಾನಂದ ಶೆಟ್ಟಿ ಪುಣ್ಕೆದಡಿ ಇವರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಲಕರಾಗಿದ್ದಾಗ ರೈತರಿಗೆ ಸಂತೆ ಮಾರುಕಟ್ಟೆ ಮಾಡಲು 10 ಸೆಂಟ್ಸ್ ಜಾಗ ಕಾದಿರಿಸಲು ಮುತ್ತೂರು ಪಂಚಾಯತ್ ಗೆ ಅರ್ಜಿಯೊಂದಿಗೆ ಮನವಿ ಮಾಡಿದ್ದಾರೆ .
ಅವರ ಮನವಿಯನ್ನು ಪುರಸ್ಕರಿಸಿ ಪಂಚಾಯತ್ ಆಡಳಿತ ಮಂಡಳಿಯು ಸಾಮಾನ್ಯ ಸಭೆಯಲ್ಲಿ ಕೊಳವೂರು ಗ್ರಾಮದ ರೈತರಿಗೆ ಸಂತೆ ( ಹಳ್ಳಿ ಸಂತೆ) ಮಾರುಕಟ್ಟೆಗೆ ಅವರು ಕೇಳಿರುವುದಕಿಂತಳು ಹೆಚ್ಚುವರಿಯಾಗಿ ಸಾಧಾರಣ 28 ಸೆಂಟ್ಸ್ ಜಾಗ ಕಾದಿರಿಸಲು ಒಂದು ವರ್ಷದ ಹಿಂದೆಯೇ ನಿರ್ಣಯ ಮಾಡಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ . ಅತೀ ಶೀಘ್ರದಲ್ಲಿ ಕೊಳವೂರು ಗ್ರಾಮದ ರೈತರ ಬೇಡಿಕೆಯಂತೆ ಮಾರುಕಟ್ಟೆಯನ್ನು ನಿರ್ಮಿಸುತ್ತೇವೆ . ಆದರೆ ಇದೀಗ ಅದೇ ಕಾಂಗ್ರೆಸ್ ಮುಖಂಡರು ರಾಜಕೀಯ ಅಸ್ತಿತ್ವಗೋಸ್ಕರ ಕೆಲವು ಸಾರ್ವಜನಿಕರನ್ನು ಎತ್ತಿಕಟ್ಟಿ ಅದೇ ಜಾಗದಲ್ಲಿ ಕಾಂಗ್ರೆಸ್ ನ ಹಿಂಬಾಲಕ ಕಾರ್ಯಕರ್ತರಿಗೆ ಸರಕಾರಿ ಭೂಮಿಯಲ್ಲಿ ಮನೆ ಇದ್ದರೂ ಪುನಃ ಮನೆ ಕಟ್ಟಲು ಮುಂದಾಗಿರುವುದು ಖೇದಕರ ಸಂಗತಿ .
ಈ ರೀತಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವುದು ಗೊಂದಲ ಸೃಷ್ಟಿಸುವುದಾಗಲಿ ಸಮಂಜಸವಲ್ಲ .ಇಲ್ಲಿನ ಗ್ರಾಮಸ್ಥರಿಗೆ ಸ್ವಂತ ನಿವೇಶನ ಇಲ್ಲದೇ 20 ವರ್ಷಗಳಿಂದ ಪರಿತಪಿಸುತ್ತಿದ್ದಾಗ, ಮುತ್ತೂರು ಪಂಚಾಯತ್ ವತಿಯಿಂದ 2023 ರಲ್ಲಿ ಮುತ್ತೂರು ಹಾಗೂ ಕೊಳವೂರು ಗ್ರಾಮದಲ್ಲಿ 118 ಅರ್ಹ ಬಡವರಿಗೆ ನಿವೇಶನ ಒದಗಿಸಿ ಹಕ್ಕು ಪತ್ರ ವಿತರಿಸಿದ್ದೇವೆ . ಅದ್ಯಾಗಿಯೂ ನಿವೇಶನ ರಹಿತರ ಇನ್ನಷ್ಟು ಅರ್ಜಿಗಳು ಬಾಕಿ ಇದ್ದು ನಿವೇಶನಕ್ಕೆ ಸರಕಾರಿ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆದು ಕಾರ್ಯ ಪ್ರವೃತರಾಗಿದ್ದೇವೆ ನಿವೇಶನವು ಪಂಚಾಯತ್ ಗೆ ಹಸ್ತಾಂತರ ಆದ ಕೂಡಲೇ ಪರಿಶಿಷ್ಟ ಜಾತಿ ಅಥವಾ ಯಾವುದೇ ಜಾತಿಯವರಾಗಲಿ ಇಲ್ಲಿ ಜಾತಿ ನಮಗೆ ಮುಖ್ಯವಲ್ಲ ಅರ್ಹತೆ ಇರುವವರಿಗೆ ಆದ್ಯತೆ ಮೇರೆಗೆ ಲಭ್ಯ ಇರುವಷ್ಟು ನಿವೇಶನ ಹಂಚುವ ಇರಾದೆಯನ್ನು ಇಡೀ ನಮ್ಮ ಪಂಚಾಯತ್ ಆಡಳಿತವು ಹೊದಿರುತೇವೆ ಎಂದು ಮಾಧ್ಯಮಕ್ಕೆ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ತಿಳಿಸಿದ್ದಾರೆ .