Thursday, September 19, 2024
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಬಲ್ನಾಡಿನಲ್ಲಿ ನಡೆದ ಮನಕಲಕುವ ಘಟನೆ .ಕೊಳೆತ ಸ್ಥಿತಿಯಲ್ಲಿದ್ದ ಶವದ ಅಂತ್ಯ ಸಂಸ್ಕಾರಕ್ಕೆ ನೇರವಾದ ವಿಶ್ವ ಹಿಂದೂ ಪರಿಷತ್ ವಿನಾಯಕ ಫ್ರೆಂಡ್ಸ್ -ಕಹಳೆ ನ್ಯೂಸ್

ಪುತ್ತೂರು: ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ಎಂಬಲ್ಲಿ ವೃದರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೆ.18ರಂದು ನಡೆದಿದೆ. ಮೃತ ವೃದ್ದ ವ್ಯಕ್ತಿಯ ಮಾನಸಿಕ ಅಸ್ವಸ್ಥಗೊಂಡಿರುವ ವೃದ್ಧ ಪತ್ನಿ ಊಟಕ್ಕಾಗಿ ಪರಿಸರದ ಮನೆಗೆ ಹೋದಾಗ ಬೆಳಕಿಗೆ ಬಂದಿದೆ. ವೃದ್ದ ರಮೇಶ್ ರಾವ್ ಮೃತಪಟ್ಟವರು.

ಮೃತ ರಮೇಶ್ ರಾವ್ ಮತ್ತು ಅವರ ಪತ್ನಿ ಇಬ್ಬರೇ ಮನೆಯಲ್ಲಿದ್ದು, ಪತ್ನಿ ಮಾನಸಿಕ ಅಸ್ವಸ್ಥಗೊಂಡಿದ್ದರು. ದಿನದ ಊಟಕ್ಕೆ ಪತಿ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಪತಿಯೇ ಮೃತಪಟ್ಟ ಬಳಿಕ ಹಸಿವಿನಿಂದ ಬಳಲುತ್ತಿದ್ದ ಮಹಿಳೆ ಪರಿಸರದ ಮನೆಯೊಂದಕ್ಕೆ ಹೋಗಿ ಊಟ ಕೊಡುವಂತೆ ಕೇಳಿದಾಗ ಆಕೆಯ ಪತಿ ಮೃತಪಟ್ಟಿರುವ ಮಾಹಿತಿ ತಿಳಿಯಿತು. ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಇರುವ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂತ್ಯ ಸಂಸ್ಕಾರಕ್ಕೆ ಕೈ ಜೋಡಿಸಿದ ವಿಹಿಂಪ, ಬಜರಂಗದಳ, ವಿನಯಾಕ ಫ್ರೆಂಡ್ಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಳೆತು ನಾರುತ್ತಿದ್ದ ವೃದ್ಧ ರಮೇಶ್ ರಾವ್ ಅವರ ಮೃತದೇಹವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಕಾರ್ಯಕರ್ತರು ಮತ್ತು ವಿನಾಯಕ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡ್ ಇದರ ಅಂಬುಲೆನ್ಸ್ ನಲ್ಲಿ ಬಲ್ನಾಡ್ ಗ್ರಾಮ ಪಂಚಾಯತ್‌ ಅಧ್ಯಕ್ಷರು ಪರಮೇಶ್ವರಿ ಬಬ್ಬಿಲಿ, ಕಿರಣ್ ಕುಮಾರ್ ಬಲ್ನಾಡ್ ಇವರ ಜೊತೆ ಕಾರ್ಯಕರ್ತರು ಸೇರಿ ಮೃತದೇಹವನ್ನು ಸಾಗಿಸಿ ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೇರವೇರಿಸಿದರು.

ಜಾಹೀರಾತು