Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ ನೂತನ ವಿದ್ಯಾರ್ಥಿ ಸಮಾವೇಶ-ಕಹಳೆ ನ್ಯೂಸ್

ಮಂಗಳೂರು : ನೂತನ ವಿದ್ಯಾರ್ಥಿ ಸಮಾವೇಶವು ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಸೆಪ್ಟೆಂಬರ್ 18, 2024ರಂದು ಜರುಗಿತು.
ಡಾ. ಸಿಎ.ಎ.ರಾಘವೇಂದ್ರರಾವ್, ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ ಇವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸುಗಳಿಸಲು ಸಕಾರಾತ್ಮಕ ಮನೋಭಾವ, ಕಠಿಣ ಪರಿಶ್ರಮ ಮತ್ತು ರಚನಾತ್ಮಕ ಜ್ಞಾನ ಹೊಂದಿರಬೇಕು ಎಂದು ಕರೆಯಿತ್ತರು. ಪ್ರೊ. ಇಆರ್. ಶ್ರೀಮತಿ. ಎ. ಮಿತ್ರಾ ಎಸ್.ರಾವ್, ಬೋರ್ಡ್ ಆಫ್ ಗವನರ‍್ಸ್, ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಕಾರ್ಯದರ್ಶಿಗಳು ಎ. ಶಾಮರಾವ್ ಫೌಂಡೇಶನ್, ಮಂಗಳೂರು ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಫಾರ್ಮಸಿ ವಿಭಾಗದಲ್ಲಿ ಇರುವಂತಹ ವಿವಿಧ ವೃತ್ತಿಪರ ಆಯ್ಕೆಗಳನ್ನು ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಶ್ರೀಮತಿ ವಿಜಯಲಕ್ಷ್ಮೀ ಆರ್. ರಾವ್, ಮೆಂಬರ್, ಬೋರ್ಡ್ ಆಫ್ ಗವನರ‍್ಸ್, ಶ್ರೀನಿವಾಸ್ ಯುನಿವರ್ಸಿಟಿ, ಮಂಗಳೂರು ಮತ್ತು ಡೈರೆಕ್ಟರ್, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆ, ಮಂಗಳೂರು ಇವರು ವಿದ್ಯಾರ್ಥಿಗಳಿಗೆ ಏನಾದರೂ ಮಾರ್ಗದರ್ಶನ ಬೇಕಾದಲ್ಲಿ ಕಾಲೇಜಿನ ಅಧ್ಯಾಪಕರ ಸಲಹೆ ಪಡೆದುಕೊಳ್ಳಲು ತಿಳಿಸಿದರು.

ಈ ಸಂದರ್ಭದಲ್ಲಿ ಸೋಷಿಯಲ್ ಫಾರ್ಮಸಿ ಎಂಬ ಪ್ರಾಯೋಗಿಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಆರ್ ಶಬರಾಯರು ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಏಳಿಗೆಯನ್ನು ತರುವಲ್ಲಿ ಶಿಸ್ತು ಬದ್ಧ ಕಠಿಣ ಪರಿಶ್ರಮ ಹಾಗೂ ಶ್ರದ್ದೆಯಿಂದ ಕೂಡಿದ ಕಲಿಕೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು. ಡಾ. ವೀರೇಶ್ ಕೆ.ಚೆಂಡೂರ, ಪ್ರೊಫೆಸರ್ ಇವರು ಡಿ.ಫಾರ್ಮ, ಬಿ.ಫಾರ್ಮ ಮತ್ತು ಫಾರ್ಮ ಡಿ. ಕೋರ್ಸಿನ ಬಗ್ಗೆ ಮಾಹಿತಿ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು ನೂತನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪದ್ಮಾವತಿ ಪಿ.ಪ್ರಭು ಮತ್ತು ಸ್ಮಿತಾ ಸಿ ಎಸ್ ಇವರು  ಕಾರ್ಯಕ್ರಮ ನಿರೂಪಿಸಿದರು. ಡಾ. ವೀರೇಶ್ ಕೆ.ಚೆಂಡೂರ, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ಇವರು ವಂದನಾರ್ಪಣೆಗೈದರು.

ಜಾಹೀರಾತು
ಜಾಹೀರಾತು
ಜಾಹೀರಾತು