ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನೆಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸೋಮವಾರ ಓಣಂ ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಲಯದ ಶಿಕ್ಷಕಿ ಸಾರಿಕಾ ಹೆಚ್ ಎಸ್ ಮಾತನಾಡಿ ಓಣಂ ಎಂಬುದು ಸುಗ್ಗಿಯ ಸಂಭ್ರಮನ್ನು ತಿಳಿಸುವ ಕೇರಳ ನಾಡಿನ ಹಬ್ಬವಾಗಿದೆ. ಈ ಹಬ್ಬ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತದೆ ಎಂದರಲ್ಲದೆ ಹತ್ತು ದಿನಗಳ ವಿಶೇಷತೆಗಳನ್ನು ಮಕ್ಕಳಿಗೆ ತಿಳಿಸಿದರು. ಎಂಟನೇ ತರತಿಯ ವಿದ್ಯಾರ್ಥಿನಿಯರು ಓಣಂ ಗೀತೆಯನ್ನು ಹಾಗೂ ಏಳನೇ ತರಗತಿಯ ವಿದ್ಯಾರ್ಥಿನಿಯರು ತಿರುವಾದಿರ ನೃತ್ಯವನ್ನು ಪ್ರದರ್ಶಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ವರ್ಣರಂಜಿತವಾಗಿ ವಿವಿಧ ಹೂಗಳಿಂದ ಪೂಕಳಂ ಅನ್ನು ರಚಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಚಾರ್ಯೆ ಮಾಲಾತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಧಿ ಕಾರ್ಯಕ್ರಮ ನಿರೂಪಿಸಿದರು.