Sunday, January 19, 2025
ಬೆಂಗಳೂರುಸಿನಿಮಾಸುದ್ದಿ

“ಮೂವರು ಇದ್ದೀವಿ, ನಮ್ಮ ಜೊತೆ ಟ್ರಿಪ್‌ಗೆ ಬಾ ಹೀರೋಯಿನ್ ಮಾಡುತ್ತೇವೆ”; ಚೈತ್ರಾ ಆಚಾರ್ ಯಾರ ಬಗ್ಗೆ ಹೇಳಿದ್ದು? – ಕಹಳೆ ನ್ಯೂಸ್

ಹೇಮಾ ಕಮಿಟಿ ವರದಿ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿದೆ. ನಟಿಯರು ಮುಂದೆ ಬಂದು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಂತೆಯೇ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಇಂತಹದ್ದೇ ಕಮಿಟಿ ಬೇಕು ಅನ್ನುವ ಒತ್ತಾಯ ಹೆಚ್ಚಾಗಿದೆ.

ಅದರಲ್ಲೂ ಕನ್ನಡ ಚಿತ್ರರಂಗದಲ್ಲೂ ಇಂತಹದ್ದೊಂದು ಹೇಮಾ ಕಮಿಟಿಯಂತಹದ್ದೇ ಸಮಿತಿ ಇಲ್ಲೂ ರಚನೆ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ, ಈ ಮನವಿಯ ವಿರುದ್ಧ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ಈ ಬಗ್ಗೆ ಕಿತ್ತಾಟ ಕೂಡ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಯಾಂಡಲ್‌ವುಡ್‌ನಲ್ಲಿ ಕಮಿಟಿ ರಚನೆ ಮಾಡುವ ಬಗ್ಗೆ ‘ಟೋಬಿ’ ನಟಿ ಚೈತ್ರಾ ಜೆ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಪವರ್ ಟಿವಿ ಜೊತೆ ಮಾತನಾಡಿದ್ದು, ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಜೂನಿಯರ್ ಆರ್ಟಿಸ್ಟ್ ಹೇಳಿದ ಅನುಭವವನ್ನು ರಿವೀಲ್ ಮಾಡಿದ್ದಾರೆ. ಈ ವೇಳೆ ನಿರ್ದೇಶಕನೊಬ್ಬ ಟ್ರಿಪ್‌ಗೆ ಕರೆದಿದ್ದರ ಬಗ್ಗೆ ರಿವೀಲ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರರಂಗದಲ್ಲಿ ಸಮಾನತೆ ಬೇಕು. ಅದರಲ್ಲೂ ಮಹಿಳೆಯರಿಗೆ ಚಿತ್ರರಂಗದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗಾಗಿ ಸಮಿತಿ ಬೇಕು ಎಂದು ಚೈತ್ರಾ ಆಚಾರ್ ಹೇಳಿದ್ದಾರೆ. “ನಾನೊಬ್ಬ ನಾಯಕ ನಟಿಯಾಗಿದ್ದರೆ, ನನ್ನ ಜೊತೆ ಕೆಲಸ ಮಾಡುವವರಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಅವರೆಲ್ಲರಿಗೂ ಆ ಸಮಾನತೆಯಿದೆ. ಫೀಮೇಲ್ ಆರ್ಟಿಸ್ಟ್ ಇಲ್ಲವೆ ಟೆಕ್ನಿಷಿಯನ್ ಸೆಟ್‌ನಲ್ಲಿ ಇದ್ದರೆ, ಅವರಿಗೆ ಶೌಚಾಲಯದ ಸೌಲಭ್ಯ, ಸಂಭಾವನೆ ಸಮಸ್ಯೆ, ಅಗ್ರಿಮೆಂಟ್, ಟ್ರೀಟ್ಮೆಂಟ್ ವಿಚಾರ ಇರಬಹುದು. ಹೀಗೆ ಎಷ್ಟೊಂದು ವಿಷಯದಲ್ಲಿ ಅವರಿಗೆ ಬೇಧ ಭಾವ ಆಗುತ್ತಿರುತ್ತೆ. ಯಾರೋ ಪವರ್ ಬಳಸಿಕೊಂಡು ಲೈಂಗಿಕ ಕಿರುಕುಳನೂ ಕೊಡಬಹುದು. ಅದು ಯಾರಿಗೂ ಗೊತ್ತಾಗುವುದಿಲ್ಲ” ಎಂದಿದ್ದಾರೆ.

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಅನುಭವ ತನಗೆ ಆಗಿಲ್ಲ. ಆದರೆ, ತನ್ನ ಜೊತೆ ಕೆಲಸ ಮಾಡುವವರಿಗೆ ಆಗಿರಬಹುದೆಂದು ಹೇಳಿದ್ದಾರೆ. “ನಾನೊಂದು ನಾಯಕ ನಟಿಯಾಗಿದ್ದರಿಂದ ನನಗೆ ಅದು ಆಗದೇ ಇರಬಹುದು. ಯಾರೋ ಜೂನಿಯರ್ ಆರ್ಟಿಸ್ಟ್‌ಗೆ ಇದು ಆದರೆ ಹೇಗೆ. ಅವರು ಒಂದು ಕನಸು ಕಟ್ಟಿಕೊಂಡು ಬಂದಿರುತ್ತಾರೆ. ನಾನು ನಾಯಕ ನಟಿ ಆಗಬೇಕು ಅಂತ. ಅವರ ಕನಸು ಅಲ್ಲೇ ಚಿವುಟಿ ಹೋಗುತ್ತೆ ಅಲ್ವಾ? ಇಲ್ಲ ಈ ಚಿತ್ರರಂಗನೇ ಬೇಡ ಅಂತ ಬಿಟ್ಟು ಹೋಗುವವರು ಇರುತ್ತಾರೆ. ಯಾಕೆ ಹೀಗೆ ಆಗುತ್ತಿದೆ ಅಂತ ಬೇರೆ ಬೇರೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.” ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, “ದೇವರ ದಯೆಯಿಂದ ನನಗೆ ಈತರ ಏನೂ ಆಗಿಲ್ಲ. ಮುಂದೆ ಏನಾದರೂ ಆದರೆ, ಇಂತಹದ್ದೊಂದು ಕಮಿಟಿಯಿದೆ. ಅಲ್ಲಿ ಹೋಗಿ ದೂರನ್ನು ಸಲ್ಲಿಸಬಹುದು ಅನ್ನೋ ಕಾನ್ಫಿಡೆನ್ಸ್ ಇರುತ್ತೆ. ಮಾಡುವವರು ಆತರಹದ್ದು ಒಂದು ಕಮಿಟಿ ಇದೆ ಅಂತ ಯೋಚನೆ ಮಾಡುತ್ತಾರೆ. ನನ್ನಂತಹವರು ಕಮಿಟಿ ಇದೆ ಅಂತ ಧೈರ್ಯವಾಗಿ ಕೆಲಸ ಮಾಡುತ್ತಾರೆ.” ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಜೂನಿಯರ್ ಆರ್ಟಿಸ್ಟ್ ಮೀಟೂ ಅನುಭವವನ್ನು ಹೇಳಿಕೊಂಡಿದ್ದಾರೆ. “ನನಗೆ ಅನುಭವ ಆಗಿಲ್ಲ. ಆದರೆ, ನನ್ನ ಜೊತೆ ಕೆಲಸ ಮಾಡುವ ಜೂನಿಯರ್ ಆರ್ಟಿಸ್ಟ್ ಒಂದು ಬಾರಿ ಹೇಳಿದ್ದು ಇದೆ. ಮೇಡಂ ನಾನು ಒಮ್ಮೆ ಆಡಿಷನ್‌ಗೆ ಹೋಗಿದ್ದೆ. ಅಲ್ಲಿ ನೀನು ಚೆನ್ನಾಗಿದ್ದೀಯ, ಚೆನ್ನಾಗಿ ಆಕ್ಟ್ ಮಾಡುತ್ತಿದ್ದೀಯ. ನಾನು, ಸಿನಿಮ್ಯಾಟೋಗ್ರಫರ್, ಪ್ರಡ್ಯೂಸರ್ ಮೂರು ಜನ ಇದ್ದೀವಿ. ನಮ್ಮ ಜೊತೆ ಸುಮ್ಮನೆ ಟ್ರಿಪ್‌ಗೋ ಹಾಲಿಡೆ ಗೋ ಬಾ. ನಾನು ನಿನ್ನನ್ನು ಹೀರೋಯಿನ್ ಮಾಡುತ್ತೇವೆ ಎಂದಿದ್ದರು. ಆ ಹುಡುಗಿ ಆ ಸ್ಥಿತಿಯಲ್ಲಿ ಏನು ಮಾಡಬೇಕು?” ಎಂದಿದ್ದಾರೆ.