Recent Posts

Friday, November 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಲ್ನಾಡು ಮನೆಯೊಳಗೆ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ-ಕಹಳೆ ನ್ಯೂಸ್

ಪುತ್ತೂರು: ವೃದ್ಧರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿರುವ ವಿಚಾರ ಪಕ್ಕದ ಮನೆಯವರ ಮೂಲಕ ಬೆಳಕಿಗೆ ಬಂದ ಘಟನೆ ಪುತ್ತೂರಿನ ಬಲ್ನಾಡಿನ ದೇರಾಜೆ ಅಟ್ಕಾರು ಎಂಬಲ್ಲಿ ನಡೆದಿದೆ. ದೇರಾಜೆ ಅಟ್ನಾರು ನಿವಾಸಿ ರಮೇಶ್ ರಾವ್ (70) ಮೃತಪಟ್ಟವರು ಎಂದು ತಿಳಿದುಬಂದಿದೆ.

ರಮೇಶ್ ರಾವ್ ಹಾಗೂ ಅವರ ಪತ್ನಿ ಸ್ವಲ್ಪ ಮಾನಸಿಕ ಅಸ್ವಸ್ಥೆಯಾಗಿರುವ ವಸಂತಿ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಮಕ್ಕಳು ಇಲ್ಲದೇ ಇರುವುದರಿಂದ ಅವರಿಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಹೆಚ್ಚಾಗಿ ಯಾರಲ್ಲೂ ಒಡನಾಟವಿಲ್ಲದೇ ಇರುವುದರಿಂದ ಎಲ್ಲಿಯೂ ಹೋಗುತ್ತಿರಲಿಲ್ಲ. ಇನ್ನು ರಮೇಶ್ ರಾವ್ ಅವರು ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರೂ ಏನೂ ಅರಿಯದಂತೆ ಪತ್ನಿ ವಸಂತಿ ಇದ್ದರು. ಆದ್ರೆ ಮಲಗಿದ್ದ ಪತಿ ಇನ್ನೂ ಎಲ್ಲಲ್ಲ ಎಂದು ಭಾವಿಸಿದ್ದ ವಸಂತಿ ಅವರು, ಹಸಿವಿನಿಂದ ಕಂಗೆಟ್ಟು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದರು. ಬಳಿಕ ಅಲ್ಲಿ ಮಧ್ಯಾಹ್ನ ಊಟ ಮಾಡಿದ ಅವರು ರಾತ್ರಿ ತಮ್ಮ ಮನೆಗೆ ತೆರಳಿದ್ದಾರೆ. ಅದಲ್ಲದೇ ವಸಂತಿ ಅವರ ಮಾತಿನ ದಾಟಿಯಲ್ಲೂ ಏನೋ ಭಾವುಕತೆ ಕಂಡುಬಂದಿತ್ತು. ಇವೆಲ್ಲವೂ ವಸಂತಿ ಅವರಿಗೆ ಊಟ ನೀಡಿದ ಪಕ್ಕದ ಮನೆಯವರಿಗೆ ಸಂಶಯವಾಗಿ ಮರುದಿನ ಬೆಳಗ್ಗೆ ರಮೇಶ್ ರಾವ್ ಅವರ ಮನೆಗೆ ಹೋದಾಗ ರಮೇಶ್ ರಾವ್ ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದರಿಂದ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಈ ಮನಕಲಕುವ ಸುದ್ದಿಯ ನಡುವೆ ರಮೇಶ್ ರಾವ್ ದಂಪತಿಯ ಕೆಲ ಸಂಬಂಧಿಕರು ಬಂದಿದ್ದರೂ ಅವರೊಡನೆ ಹೆಚ್ಚಾಗಿ ಒಡನಾಟವಿಲ್ಲದ್ದರಿಂದ ದೂರದಿಂದಲೇ ನೋಡಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೆ ಅಲ್ಲಿಯ ವಾಸ್ತವ ಸ್ಥಿತಿಯನ್ನು ಅರಿತು ಬಲ್ನಾಡಿನ ಸಂಘಟನೆಯವರೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರಿನ ಕಾರ್ಯಕರ್ತರು ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಬಲ್ನಾಡು ಇವರ ಆಂಬುಲೆನ್ಸ್ ನಲ್ಲಿ ಮೃತದೇಹವನ್ನ ತಂದು ಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ಸಂದರ್ಭ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಪರಮೇಶ್ವರಿ ಬಬ್ಬಲಿ, ಕಿರಣ್ ಕುಮಾರ್ ಬಲ್ನಾಡು ಸಹಕರಿಸಿದರು.