Recent Posts

Thursday, November 21, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಅಂದರ್ – ಬಹಾರ್ (ಉಲಾಯಿ –ಪಿದಾಯಿ) ಆಟ ಆಡುತ್ತಿದ್ದ ವೇಳೆ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ನೇತೃತ್ವದ ತಂಡದಿಂದ ದಾಳಿ : 23 ಮಂದಿ ಅರೆಸ್ಟ್ – ಕಹಳೆ ನ್ಯೂಸ್

ಬಂಟ್ವಾಳ: ಅಂದರ್ – ಬಹಾರ್ ಪಿದಾಯಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ನೇತೃತ್ವದ ತಂಡ 23 ಮಂದಿಯನ್ನು ಬಂಧಿಸಿ ,ಆಟದಲ್ಲಿ ಉಪಯೋಗಿಸಿದ ಹಣ ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಮಡಂತ್ಯಾರು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‍ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಹಾರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದ ವೇಳೆ ದಾಳಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729 ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖ ಆರೋಪಿ ಮೊನಪ್ಪ ಪೂಜಾರಿ, ಬಿ.ಸಿ ರೋಡ್, ಬಂಟ್ವಾಳ (ಜುಗಾರಿ ಕೃತ್ಯವನ್ನು ನಡೆಸುತ್ತಿದ್ದಾತ, ಪರಾರಿಯಾಗಿರುತ್ತಾನೆ.) ಉಳಿದಂತೆ ಆಟದಲ್ಲಿ ತೊಡಗಿದ್ದ 23 ಮಂದಿಯನ್ನು ಬಂಧಿಸಲಾಗಿದೆ.

ಅಬ್ದುಲ್ ಖಾದರ್, ಮೊಹಮ್ಮದ್ ಹೈದರ್,ಜೋಸ್ ತೋಮಸ್, ಅಬೂಬಕ್ಕರ್,ಲೋಕನಾಥ ತುಕರಾಮ್, ಅಬ್ದುಲ್ ರಹಿಮಾನ್, ಯಶೋಧರ, ರಮೇಶ್ ಆಚಾರ್ಯ, ಜಿ.ಎ.ದಾವೂದ್, ರಿಯಾಜ್ @ ರಿಯಾಜುದ್ದೀನ್ , ಹಮ್ಮದ್ ಅಬೂಬಕ್ಕರ್ ಅಬ್ದುಲ್ ರವೂಫ್, ಮುಸ್ತಾಫ, ಎಂ.ಅಶ್ರಫ್, ರಮೇಶ್.ಕೆ, ಅಬ್ದುಲ್ ರಝಾಕ್, ಕಮಲಾಕ್ಷ ದಾಸ್, ವಿಜಯ ಕುಮಾರ್, ಮಜೀದ್ ಯಾನೆ ಅಬ್ದುಲ್ ಮಜೀದ್, ಶ್ರೀಧರ ಪೂಜಾರಿ, ಮುನ್ನ @ ಮುಸ್ತಾಫ, ಬಂಧಿತ ಆರೋಪಿಗಳು.

ನ್ಯಾಯಾಲಯದಿಂದ ಅನುಮತಿ ಪಡೆದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೆÇಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.