Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಖೋ-ಖೋ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ- ಕಹಳೆ ನ್ಯೂಸ್

ವಿದ್ಯಾಭಾರತಿ ಕರ್ನಾಟಕ ಇದರ ಝೋನಲ್ ಲೆವೆಲ್ ಖೋ-ಖೋ ಪಂದ್ಯಾಟವು ಆಂಧ್ರಪ್ರದೇಶದ ವಿಜ್ಞಾನ ವಿಹಾರ ಆಂಗ್ಲ ಮಾಧ್ಯಮ ಪ್ರೌಢಶಾಲೆ ನುಟಾಕ್ಕಿ ಇವರ ಸಹಯೋಗದಲ್ಲಿ, ಕೆ.ಎಲ್. ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 14 ರಂದು ನಡೆಯಿತು.

ಈ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ತರುಣ ವರ್ಗದ ಬಾಲಕಿಯರ ತಂಡ ಭಾಗವಹಿಸಿರುತ್ತದೆ, ಬಾಲಕಿಯರ ತಂಡದಲ್ಲಿರುವ ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಆಶಾ,ಸಮೀಕ್ಷಾ,ಹರ್ಷಿತಾ, ಅನನ್ಯ, ದ್ವಿತೀಯ ವಿಜ್ಞಾನ ವಿಭಾಗದ ತನ್ಮಯಿ ಬಿ. ಸುವರ್ಣ, ಮೋಕ್ಷಿತಾ,ತೃಷಾ, ಪ್ರಥಮ ವಾಣಿಜ್ಯ ವಿಭಾಗದ ಸಿಂಚನಾ ಎಸ್. ಎಮ್.,ಕೃತಿ ಎಚ್.,ಶೀಲಾ ಎಸ್., ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯಶ್ರೀ ಕೆ.,ಪ್ರತೀಕ್ಷಾ ಇವರು ಈ ಝೋನಲ್ ಲೆವೆಲ್ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಈ ವಿದ್ಯಾರ್ಥಿಗಳು ಗುಜರಾತಿನ ಆದಿಪುರದಲ್ಲಿ ಅಕ್ಟೋಬರ್ 3ಕ್ಕೆ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು