Friday, September 20, 2024
ಸುದ್ದಿ

ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ – ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ ದರ ಇಳಿಕೆ ಕಾಣುವ ಮೂಲಕ ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ, ನರಕ ಚತುರ್ದಶಿ ದಿನವಾದ ಇಂದೂ ಸಹ ಇಳಿಕೆಯತ್ತ ಮುಖ ಮಾಡಿದೆ.

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 14 ಪೈಸೆ ಕಡಿಮೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 78.42 ರೂಪಾಯಿಗಳಾಗಿದೆ. ಅದೇ ರೀತಿ ಡೀಸೆಲ್ ಬೆಲೆಯಲ್ಲೂ 9 ಪೈಸೆ ಕಡಿಮೆಯಾಗಿದ್ದು ಪ್ರತಿ ಲೀಟರ್ ಡೀಸೆಲ್ ಬೆಲೆ 73.07 ರೂಪಾಯಿಗಳಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿಗದಿಯಾಗುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವುದೂ ಬೆಲೆ ಇಳಿಕೆಗೆ ಕಾರಣವಾಗಿದೆ. ದೀಪಾವಳಿಯಂದು ಇಳಿಕೆ ಕಾಣುತ್ತಿದ್ದು ವಾಹನ ಸವಾರರಲ್ಲಿ ನೆಮ್ಮದಿ ಮೂಡಿಸಿದೆ.

ಜಾಹೀರಾತು