ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ; ಅಂಕದ ಜತೆಗೆ ಸಂಸ್ಕೃತಿಯುತ-ಸAಸ್ಕಾರಯುತ ಮಗುವನ್ನು ಬೆಳೆಸಲು ಪೋಷಕರ ಎಚ್ಚರಿಕೆ ಹೆಜ್ಜೆ ಅಗತ್ಯ -ಡಾ. ಅನುರಾಧಾ ಕುರುಂಜಿ-ಕಹಳೆ ನ್ಯೂಸ್
ಸುಳ್ಯ:ಒಬ್ಬ ಮಗು ಉತ್ತಮ ಪ್ರಜೆಯಾಗಿ ರೂಪಿಸಲು ,ಪೋಷಕರು ಶಿಕ್ಷಕರು ಕೆತ್ತನೆಯ ಶಿಲ್ಪಿಗಳಾಗಬೇಕು. ವಿದ್ಯಾರ್ಥಿ ಜೀವನದ ಮಾನದಂಡವಾದ ಅಂಕದ ಜತೆ ಗೆ ಸಂಸ್ಕೃತಿಯುತ-ಸAಸ್ಕಾರಯುತ ವಾಗಿ ಮಕ್ಕಳನ್ನು ಬೆಳೆಸಲು ಪೋಷಕರು ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯತೆ ಇದೆ ಎಂದು ಉಪನ್ಯಾಸಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಅನುರಾಧ ಕುರುಂಜಿ ಹೇಳಿದರು.
ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯಶಿಕ್ಷಕಿ ಜಯಲತಾ ಕೆ ಆರ್ ಇದ್ದರು. ಶಿಕ್ಷಕಿ ಮೀನಕುಮಾರಿ ಸಂಪನ್ಮೂಲ ವ್ಯಕ್ತಿ ಅವರನ್ನು ಪರಿಚಯಿಸಿದರು. ಶಿಕ್ಷಕಿ ಸವಿತಾ ಕುಮಾರಿ ವಂದಿಸಿದರು. ಶಿಕ್ಷಕ ಶಿವಪ್ರಕಾಶ ಕೆ ಕಾರ್ಯಕ್ರಮ ನಿರೂಪಿಸಿದರು. ಉತ್ಪಾದನಾ ರೀತಿ ಅವುಗಳ ಬಳಕೆ ಮತ್ತು ಉಪಯೋಗಶೂನ್ಯ ವಸ್ತ್ರಗಳ ಅಸಮರ್ಪಕ ವಿಲೇವಾರಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ,ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಲ್ಲಿ ಸಮರ್ಪಕವಾದ ಬಳಕೆ ಮತ್ತು ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿದರು. ನೂತನ ಬ್ರ‍್ಯಾಂಡ್ ಅಭಿವೃದ್ಧಿ, ಜನರ ಅಭಿರುಚಿ ಮತ್ತು ಆಯ್ಕೆಗೆ ಅನುಗುಣವಾಗಿ ನವೀನ ರೀತಿಯ ವಸ್ತ್ರ ವಿನ್ಯಾಸದ ವ್ಯಾಪ್ತಿ ಮತ್ತು ಉದ್ಯೋಗ ದ ಸೃಷ್ಟಿ ಯ ಬಗ್ಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ತೃತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯರಾದ ದೀಕ್ಷಾ ಸ್ವಾಗತಿಸಿ, ಕುಮಾರಿ ಧನ್ಯ ಶ್ರೀ ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ ಮಾಡಿದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಅನುಷಾ ಪ್ರವೀಣ್ ಕುಮಾರ್, ಫೆಸೇರ ಅಸೋಸಿಯೇಷನ್ ಸಂಯೋಜಕ ಸಹ ಪ್ರಾಧ್ಯಾಪಕರಾದ ಶ್ರೀ ಕಿಶನ್ ಎನ್. ರಾವ್ , ಸಹ ಪ್ರಾಧ್ಯಾಪಕಿಯರಾದ ಕುಮಾರಿ ಜನೀತ, ಕುಮಾರಿ ಅನನ್ಯ ಭಟ್ ಮತ್ತು ಕುಮಾರಿ ಧನ್ಯ ಶ್ರೀ ಉಪಸ್ಥಿತರಿದ್ದರು.