Sunday, November 24, 2024
ಕ್ರೈಮ್ಬೆಂಗಳೂರುಸುದ್ದಿ

ಗಂಡನ ಬಿಟ್ಟು ಅಶ್ರಫ್ ಹಿಂದೆ ಬಂದಿದ್ದಳಾ ಮಹಾಲಕ್ಷ್ಮೀ? ಆಕೆಯನ್ನು 59 ತುಂಡು ಮಾಡಿದ್ಯಾರು? ಲವ್ ಜಿಹಾದ್ ??- ಕಹಳೆ ನ್ಯೂಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಮಹಿಳೆಯ ದೇಹವನ್ನ 59 ಪೀಸ್ ಮಾಡಿ ಫ್ರಿಡ್ಜ್​ನಲ್ಲಿ ಇಟ್ಟಿದ್ದಾನೆ ಆರೋಪಿ. ಹಂತಕನ ಪತ್ತೆಗೆ 6 ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದೀಗ ಎಲ್ಲಾ ತುಂಡುಗಳಿಗೂ ಮೊದಲು ನಂಬರಿಂಗ್ ಮಾಡಿ, ಆ ಬಳಿಕ ಆಯ್ದ ತುಂಡುಗಳಲ್ಲಿ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ ಎನ್ನಲಾಗಿದೆ.

ಆ ಬಳಿಕ ಡಿಎನ್​​ಎ ಪರೀಕ್ಷೆ ಮಾಡಿ, ಅವಶ್ಯಕತೆ ಇದ್ದರೇ ಬಾಡಿ ರೀ ಅಸೆಂಬಲ್ ಮಾಡಿ ಅಂತಿಮವಾಗಿ ಕಂಡು ಬರುವ ಅಂಶಗಳನ್ನು ಸೇರಿಸಿ ವರದಿ ಸಿದ್ಧಪಡಿಸಲಾಗುತ್ತೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಲಕ್ಷ್ಮಿ ಕೊಲೆ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣದ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದೆ. ಮಹಿಳೆ ಜೊತೆಗೆ ಸ್ನೇಹ ಬೆಳೆಸಿದ್ದ ಮೆನ್ಸ್ ಪಾರ್ಲರ್ ವ್ಯಕ್ತಿ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಮಹಾಲಕ್ಷ್ಮೀ ಜೊತೆಗೆ ಆತ್ಮಿಯತೆ ಹೊಂದಿದ್ದ, ಆದರೆ 2 ತಿಂಗಳ ಹಿಂದೆ ಇಬ್ಬರ ಮಧ್ಯೆ ಬಿರುಕು ಉಂಟಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಾರ್ಲರ್​ ವ್ಯಕ್ತಿಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿರಾಣಿ ಅಂಗಡಿ ಮಾಲೀಕ ಗಜೇಂದ್ರ ಸ್ಪಷ್ಟನೆ

ಮೃತ ಮಹಾಲಕ್ಷ್ಮಿ ಭೀಕರ ಕೊಲೆ ಸಂಬಂಧ ಕೊಲೆಗೂ ಮುನ್ನ ಕೊನೆಯದಾಗಿ ಮೃತ ಮಹಿಳೆಯನ್ನ ಗಜೇಂದ್ರ ಎಂಬುವರು ನೋಡಿದ್ರಂತೆ. ಈ ಕುರಿತು ಮಾತನಾಡಿದ ಗಜೇಂದ್ರ, ಮಹಾಲಕ್ಷ್ಮೀಯನ್ನು ಕಳೆದ ತಿಂಗಳು ಕೊನೆ ಬಾರಿ ನೋಡಿದ್ದು, ಪ್ರತಿನಿತ್ಯ ಕೆಲಸ ಮುಗಿಸಿ ಮನೆಗೆ ತೆರಳ್ತಿದ್ದಾಗ ಸ್ನ್ಯಾಕ್ಸ್ ಖರೀದಿ ಮಾಡುತ್ತಿದ್ದರು. ಬೆಳಗ್ಗೆ 9 ಗಂಟೆಗೆ ಹೋಗಿ ರಾತ್ರಿ 9 ಗಂಟೆಗೆ ರೂಮ್​ಗೆ ವಾಪಸ್ ಆಗುತ್ತಿದ್ದರು ಅಂತ ಮಾಹಿತಿ ನೀಡಿದ್ದಾರೆ. ಇನ್ನು ಓರ್ವ ಯುವಕ ಡೈಲಿ ಪಿಕ್‌ ಅಪ್‌ ಅಂಡ್‌ ಡ್ರಾಪ್‌ ಮಾಡ್ತಿದ್ದ ಎಂದಿದ್ದಾರೆ.

ಮೃತ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವಿಚಾರ ನನಗೆ ಮೊನ್ನೆ ಗೊತ್ತಾಯ್ತು, ಮನೆಯ ಮಾಲೀಕರು ಫೋನ್ ಮಾಡಿ ಮಾಹಿತಿ ನೀಡಿದ್ದರು. ಮಹಲಾಕ್ಷ್ಮೀ ರೂಮ್ ಇಂದ ವಾಸನೆ ಬರ್ತಿದೆ ಅಂತ ಫೋನ್ ಮಾಡಿದ್ದರು. ಮೊದಲು ನೆಲಮಂಗಲದಲ್ಲಿ ಇದ್ದರು, ನೇಪಾಳ ಮೂಲದವರಾಗಿದ್ದು ಬೆಂಗಳೂರಿಗೆ ಬಂದು 35 ವರ್ಷ ಆಯ್ತು, ಮದುವೆಯಾಗಿ 5 ವರ್ಷ ಆಗಿದೆ. 9 ತಿಂಗಳಿನಿಂದ ನನ್ನಿಂದ ಪತ್ನಿ ದೂರ ಇದ್ದಾಳೆ, ನನ್ನ ಮೇಲೆ ಅವರು ದೂರು ನೀಡಿದ್ದರು. ಅಶ್ರಫ್ ಎನ್ನುವವರ ವಿರುದ್ಧ ಈ ಹಿಂದೆ ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ದೆ, ಆತ ಉತ್ತರಾಖಂಡ ಮೂಲದವನು, ಕಳೆದ ವರ್ಷ ಅವನ ಜೊತೆ ಸಲುಗೆ ಇಂದ ಇರೋದು ಗೊತ್ತಾಯ್ತು. ಈಗ ಆತನ ಮೇಲೆಯೇ ಅನುಮಾನವಿದೆ ಎಂದು ತಿಳಿಸಿದ್ದಾರೆ.