Sunday, January 19, 2025
ಮುಂಬೈಸಿನಿಮಾಸುದ್ದಿ

ಹರಿದ ಪ್ಯಾಂಟ್ ಧರಿಸಿ ಸ್ಟೈಲೀಶ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ‌ ಫ್ಯಾಷನ್‌ವೊಂದರಲ್ಲಿ ಭಾಗಿಯಾಗಿದ್ದಾರೆ. ಹರಿದ ಪ್ಯಾಂಟ್ ಧರಿಸಿ ಕ್ಯಾಮೆರಾಗೆ ಸಖತ್ ಆಗಿ ಪೋಸ್ ನೀಡಿದ್ದಾರೆ. ನಟಿಯು ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದುಬಾರಿ ಮೌಲ್ಯದ ಬ್ಯಾಗ್ ಹಿಡಿದು ಹರಿದ ಪ್ಯಾಂಟ್‌ಗೆ ಕಪ್ಪು ಬಣ್ಣದ ಟಾಪ್ ಧರಿಸಿ ಮಿಂಚಿದ್ದಾರೆ. ನಟಿಯ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ರೆ, ಇನ್ನೂ ಕೆಲ ನೆಟ್ಟಿಗರು ನಿಮಗೆ ಹಾಕಿಕೊಳ್ಳಲು ಬಟ್ಟೆ ಇಲ್ವಾ? ಎಂದು ರಶ್ಮಿಕಾಗೆ ಟಾಂಗ್‌ ಕೊಟ್ಟಿದ್ದಾರೆ.

‘ಪುಷ್ಪ 2’ (Pushpa 2) ಮತ್ತು ‘ಛಾವಾ’ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಕುಬೇರ, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

 

ಇನ್ನೂ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಮುಂಬರುವ ಸಿನಿಮಾಗೆ ರಶ್ಮಿಕಾರನ್ನೇ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ. ಇದು ನಿಜನಾ? ಎಂಬುದು ಖಾತ್ರಿಯಾಗಿಲ್ಲ. ಈ ಕುರಿತು ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಬೇಕಿದೆ.

ಸದ್ಯ ಬೇಡಿಕೆ ನಟಿಯಾಗಿರುವ ರಶ್ಮಿಕಾ ಕಥೆಗೆ ಮತ್ತು ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಆದರಿಂದಲೇ ಸಕ್ಸಸ್‌ಫುಲ್ ಪ್ಯಾನ್ ಇಂಡಿಯಾ ನಾಯಕಿಯಾಗಿ ಕೊಡಗಿನ ನಟಿ ಸದ್ದು ಮಾಡುತ್ತಿದ್ದಾರೆ.