ವಾಷಿಂಗ್ಟನ್: ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಗನ್ನಿಂದ ಅಜ್ಜಿಗೆ ಶೂಟ್ ಮಾಡಿ ತಾನು ಅದೇ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂತ್ರಸ್ತೆಯ ಪತಿ ಹೇಳುವಂತೆ, ಕೊಠಡಿಯನ್ನು ಕ್ಲೀನ್ ಮಾಡು ಎಂದು ಹೇಳಿದ್ದಕ್ಕೆ ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ. 11 ವರ್ಷದ ಬಾಲಕ ತನ್ನ 65 ವರ್ಷದ ಅಜ್ಜಿಯ ತಲೆಗೆ ಗುಂಡು ಹಾರಿಸಿದ್ದಾನೆ.
ಕೊಠಡಿ ಸ್ವಚ್ಛಗೊಳಿಸುವಂತೆ ಹೇಳಿ ಅಜ್ಜಿ ಟಿವಿ ನೋಡುತ್ತಾ ಕುಳಿತಿದ್ದಾಗ ಹಿಂದಿನಿಂದ ಬಂದ ಬಾಲಕ ತಾತನ ಬಂದೂಕನ್ನು ತೆಗೆದುಕೊಂಡು ತಲೆಗೆ ಶೂಟ್ ಮಾಡಿದ್ದಾನೆ. ಕೂಡಲೇ ಆಕೆಯ ಪತಿ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಓಡಿಹೋದ ಬಾಲಕ ಅದೇ ಗನ್ನಿಂದ ತಾನು ಗುಂಡು ಹಾರಿಸಿಕೊಂಡಿದ್ದಾನೆ.
ತನಿಖೆ ಕೈಗೊಂಡ ಪೊಲೀಸರಿಗೆ ಬಾಲಕನು ತನ್ನ ಅಜ್ಜಿ ಅಥವಾ ಯಾರನ್ನು ಕೊಲ್ಲಲು ಪೂರ್ವ ನಿಯೋಜಿತ ಯೋಜನೆ ರೂಪಿಸಿರಲಿಲ್ಲ ಎಂದು ತಿಳಿದುಬಂದಿದೆ.