Sunday, January 19, 2025
ಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಮಠ, ದೇವಾಲಯಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು: ಮಂತ್ರಾಲಯ ಶ್ರೀ ಒತ್ತಾಯ – ಕಹಳೆ ನ್ಯೂಸ್

ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಗೆ ಸ್ವಾಮೀಜಿ ಖಂಡನೆ

ರಾಯಚೂರು: ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಯಚೂರಿನಲ್ಲಿ ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ವಿಚಾರವಾಗಿ ಮಾತನಾಡಿದ ಮಂತ್ರಾಲಯ ಶ್ರೀಗಳು, ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆ ನಡೆಯುತ್ತಿತ್ತು. ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶದಲ್ಲಿ ಹೋಗಿದೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ  ಪ್ರಕರಣದಂತ ತೊಂದರೆಗಳು ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಯಾ ಪ್ರಾಂತದ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ಸನಾತನ ಧರ್ಮ‌ ಪರಿರಕ್ಷಣ ಸಂಬಂಧ ಯೋಜನೆಯನ್ನ ನಾವು ಕೂಡ ಬೆಂಬಲಿಸುತ್ತೇವೆ. ನಮ್ಮ ಊರಿನ ಆಚಾರ-ಸಂಪ್ರದಾಯ ಬಗ್ಗೆ ಬೇರೆ ಯಾರೋ ಬಂದು ಹೇಳುವುದಲ್ಲಾ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ವಿದ್ವಾಂಸರು, ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು ಎಂದಿದ್ದಾರೆ.

ಮುಜರಾಯಿ ಇಲಾಖೆಯಿಂದ ಮಠ ಮಾನ್ಯಗಳು, ದೇವಾಲಯ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮುಕ್ತವಾಗಬೇಕು ಅಂತಾ ಒತ್ತಾಯಿಸುತ್ತೇವೆ ಎಂದು ಮಂತ್ರಾಲಯ ಶ್ರೀಗಳು ಹೇಳಿದ್ದಾರೆ.