Sunday, January 19, 2025
ಅಂತಾರಾಷ್ಟ್ರೀಯಸಿನಿಮಾಸುದ್ದಿ

ಮಿಸ್ ಯೂನಿವರ್ಸ್ ಇಂಡಿಯಾ-2024 ಕಿರೀಟ ಗೆದ್ದ ಗುಜರಾತಿ ಸುಂದರಿ ರಿಯಾ ಸಿಂಘಾ – ಕಹಳೆ ನ್ಯೂಸ್

ಜೈಪುರ: ಗುಜರಾತಿ ಯುವತಿ ರಿಯಾ ಸಿಂಘಾ  ‘ಮಿಸ್ ಯೂನಿವರ್ಸ್ ಇಂಡಿಯಾ 2024’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ಮಿಸ್‌ ಯೂನಿವರ್ಸ್‌ ಇಂಡಿಯಾ ಗೆಲುವಿನ ಬಗ್ಗೆ ರಿಯಾ ಖುಷಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು ಗೆದ್ದಿದ್ದೇನೆ. ನಾನು ತುಂಬಾ ಕೃತಜ್ಞಳಾಗಿದ್ದೇನೆ. ಈ ಮಟ್ಟಕ್ಕೆ ಹೋಗಲು ನಾನು ತುಂಬಾ ಕೆಲಸ ಮಾಡಿದ್ದೇನೆ. ಈ ಕಿರೀಟಕ್ಕೆ ನಾನು ಸಾಕಷ್ಟು ಅರ್ಹಳೆಂದು ಪರಿಗಣಿಸಬಹುದು. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ ಎಂದು ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ಮತ್ತು ಮಿಸ್ ಯೂನಿವರ್ಸ್ ಇಂಡಿಯಾ 2015, ಊರ್ವಶಿ ರೌಟೇಲಾ ಈವೆಂಟ್‌ನಲ್ಲಿ ತೀರ್ಪುಗಾರರಾಗಿದ್ದರು. ಭಾರತವು ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಹುಡುಗಿಯರ ಭಾವನೆ ಏನೆಂದು ನಾನು ಭಾವಿಸುತ್ತೇನೆ. ವಿಜೇತರು ಮನಮುಟ್ಟುತ್ತಾರೆ. ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಭಾರತವು ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುತ್ತದೆ ಎಂಬ ಭರವಸೆ ನನಗಿದೆ. ಎಲ್ಲಾ ಹುಡುಗಿಯರು ಕಷ್ಟಪಟ್ಟಿದ್ದಾರೆ ಎಂದು ರೌಟೇಲಾ ಪ್ರತಿಕ್ರಿಯಿಸಿದ್ದಾರೆ.

ರಿಯಾ ಸಿಂಘಾ ಈಗ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಈವೆಂಟ್‌ ನಡೆಯಲಿದೆ.