Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಂಟ್ವಾಳ: ಕಿಟಕಿಯ ಸರಳನ್ನು ಬಗ್ಗಿಸಿ ಮನೆ ಒಳಗೆ ಪ್ರವೇಶಿಸಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳ್ಳತನ- ಕಹಳೆ ನ್ಯೂಸ್

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮನೆಯೊಂದರ ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಒಳ ಪ್ರವೇಶಿಸಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 24 ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು ರೂ 25000 ನಗದು ಕಳ್ಳತನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳದ ಸಜೀಪಮುನ್ನುರು ಗ್ರಾಮ ನಿವಾಸಿ ಜಯಲಕ್ಷ್ಮೀ (52 ವ) ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. ಅವರು ರು ಸೆ.7ರಂದು ತನ್ನ ಮನೆಗೆ ಬೀಗ ಹಾಕಿ ಪುತ್ತೂರು ಸಂಟ್ಯಾರ್ ಕೈಕಾರದಲ್ಲಿರುವ ತಮ್ಮ ತಾಯಿ ಮನೆಗೆ ಹೋಗಿದ್ದರು. ಸೆ. 23ರಂದು ಸಂಜೆ ಮನೆಗೆ ಹಿಂತಿರುಗಿದ್ದು. ಈ ವೇಳೆ ಮನೆಯ ಬಾಗಿಲಿನ ಡೋರ್ ಲಾಕ್ ಜಖಂಗೊಂಡಿದ್ದು, ಕಿಟಕಿಯ ಸರಳನ್ನು ಬಗ್ಗಿಸಿ ಯಾರೋ ಒಳ ಪ್ರವೇಶ ಮಾಡಿರುವುದು ಕಂಡುಬಂದಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯನ್ನು ಪರಿಶೀಲಿಸಿದಾಗ ಗೋಡೇಜ್ ಮತ್ತು ಬೇಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿತ್ತು. ಅಲ್ಲದೇ ಗೋಡೇಜ್ ನಲ್ಲಿಟ್ಟಿದ್ದ ಸುಮಾರು 21 ½ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು ರೂ 25 ಸಾವಿರ ಕಳವುಗೆಯ್ಯಲಾಗಿತ್ತು.
ಕಳುವಾದ ಸೋತ್ತುಗಳ ಒಟ್ಟು ಮೌಲ್ಯ ರೂ 1,25,000 ಆಗಿರಬಹುದೆಂದು ಅಂದಾಜಿಸಲಾಗಿದೆ.

ಜಯಲಕ್ಷ್ಮೀಯವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ.159/2024 :ಕಲಂ 331(3),331(4),305 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ