Saturday, April 5, 2025
ಸುದ್ದಿಹುಬ್ಬಳ್ಳಿ

ಭಗವದ್ಗೀತೆ ಹಾಗೂ ಖುರಾನ್ ಮೂಲಕ ಸಮಾನತೆಯ ಮಂತ್ರ ಜಪಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು – ಕಹಳೆ ನ್ಯೂಸ್

ಹುಬ್ಬಳ್ಳಿ:ಅವಳಿ ನಗರದಲ್ಲಿ ನಡೆದ ಗಣೇಶ್ಯೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಸಕ್ಸಸ್ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಕಾರ್ಯಕ್ರಮದಲ್ಲಿ ಭಾಷಣದ ಮೂಲಕ ಎಲ್ಲರ ಗಮನವನ್ನು ಸೆಳೆದರು. ಜಾತಿ ಜಾತಿ ಎಂಬ ಭೇದವನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ,ಎಲ್ಲರೂ ಒಂದೇ ಜಾತಿ ಎಂಬ ಸಂದೇಶವನ್ನು ಭಗವದ್ಗೀತೆ ಹಾಗೂ ಖುರಾನ್ ನಲ್ಲಿನ ಸೂರ್ ಹೇಳುವುದರ ಮೂಲಕ ಎಲ್ಲರನ್ನು ನಿಬ್ಬೆರಿಸುವಂತೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿಯ ಈ ಮಾತುಗಳನ್ನು ಅಲ್ಲಿದ್ದ ಹಿಂದೂ ಮುಸ್ಲಿಂ ಗುರುಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಾ ಇವರ ಮಾತುಗಳನ್ನು ಕೇಳಿ ಚಪ್ಪಾಳೆಯ ಮಳೆಯನ್ನು ಗೈದರು.ಒಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಈ ಮಾತುಗಳು ಎಲ್ಲ ಮನುಜ ಕುಲಕ್ಕೆ ಮನ ಮುಟ್ಟುವಂತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ