Friday, November 15, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ- ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಎನ್ .ಎಸ್ . ಎಸ್ ನ ಘಟಕಗಳ ನೇತೃತ್ವದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.

ಎನ್ ಎಸ್ ಎಸ್ ದಿನಾಚರಣೆ ಯನ್ನು ಡಾ ಹರಿಪ್ರಸಾದ್ ಎಸ್ ಸಹ ಪ್ರಾಧ್ಯಾಪಕರು ವಾಣಿಜ್ಯ ವಿಭಾಗ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ವ್ಯಾಪ್ತಿಯಲ್ಲಿ ಪ್ರಸ್ತುತ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿ , ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಬೆಳೆಸಿ ಸಾಮಾಜಿಕ ಪ್ರತಿ ಬದ್ಧತೆ ಯನ್ನು ಕಾಪಾಡಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಪುರಸ್ಕಾರ, ಅತ್ಯುತ್ತಮ ಸ್ವಯಂ ಸೇವಕ ಮತ್ತು ಸ್ವಯಂ ಸೇವಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2021- 23 ರ ಸಾಲಿನ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಯನ್ನು ರೋಹಿತ್ ಮತ್ತು ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಯನ್ನು ಕುಮಾರಿ ವಿದ್ಯಾ ಶ್ರೀ ಪಡೆದರು. 2022- 23 ರ ಸಾಲಿನ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಯನ್ನು ಕೀರ್ತನ್ ಮತ್ತು ಅತ್ಯುತ್ತಮ ಸ್ವಯಂ ಸೇವಕಿ ದೀಕ್ಷಾ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

2023- 24 ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವೇದಿಕೆಯಲ್ಲಿನ ಗಣ್ಯರು ವಿತರಿಸಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ಪ್ರಣಮ್ಯ ಸಿ ಎ ಹಿರಿಯ ಸ್ವಯಂ ಸೇವಕಿ , ಅಂತರರಾಷ್ಟ್ರೀಯ ಯೋಗ ಪಟು ಮತ್ತು ವಿಶ್ವವಿದ್ಯಾನಿಲಯದ ಪ್ರಥಮ ರ‍್ಯಾಂಕ್‌ ವಿಜೇತೆ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ ರವರು ನಿರ್ವಹಿಸಿ , ತಮ್ಮ ಅನುಭವವನ್ನು ಹಂಚಿಕೊಂಡು, ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯ ಪರಿಪೂರ್ಣ ಬದುಕಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ . ಅದೆಷ್ಟೋ ವಿಷಯಗಳನ್ನು ನಾವು ನಮಗೆ ಅರಿವಿಲ್ಲದೆ ನಿರಂತರವಾಗಿ ಕಲಿಯುತ್ತೇವೆ . ಈ ಯೋಜನೆಯು ಬದುಕಿಗೆ ಒಂದು ಉತ್ತಮ ಪಾಠವನ್ನು ಕಲಿಸುತ್ತದೆ ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಆಡಳಿತಾಧಿಕಾರಿಯಾದ ಶ್ರೀ ಅರ್ಪಿತ್ ಟಿ ಎ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರ ವ್ಯಾಪ್ತಿ ಒಂದು ಯೋಜನಾಬದ್ಧ ಸಂಘಟನೆ ಯಾಗಿದ್ದು , ಸಾಮಾಜಿಕ ಕಳಕಳಿಗೆ ಸ್ಪಂದಿಸಿ ವ್ಯಕ್ತಿ ವಿಕಸನದೊಂದಿಗೆ ಸಾಮಾಜಿಕ ಪರಿವರ್ತನೆಗೆ ಪಣ ತೊಟ್ಟ ಯುವ ಸಮೂಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ಗಳಿಗೆ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಸ್ಮರಣಿಕೆ ನೀಡಿ ಗೌರವಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕ 2 ರ ಕಾರ್ಯಕ್ರಮಮಾಧಿಕಾರಿ ಮೇಘ ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಮಾರಿ ಪ್ರಕೃತಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿ ಪ್ರಾರ್ಥಿಸಿದರು. ಉದ್ಘಾಟಕರ ಕಿರು ಪರಿಚಯವನ್ನು ಘಟಕ 1 ರ ನಾಯಕಿ ವರ್ಷಿಣಿ ಮಾಡಿದರು. ಮುಖ್ಯ ಅತಿಥಿಯಾದ ಕುಮಾರಿ ಪ್ರಣಮ್ಯ ಸಿ ಎ ರವರ ಕಿರು ಪರಿಚಯವನ್ನು ರಾಕೇಶ್ (ಘಟಕ 1 ರ ನಾಯಕ) ಮಾಡಿದರು. ಶ್ರುತಿ ( ಘಟಕ 2 ರ ನಾಯಕಿ) ಸ್ವಾಗತಿಸಿ , ಅಖಿಲೇಶ್ (ಘಟಕ 2 ರ ನಾಯಕ) ವಂದಿಸಿದರು. ಕುಮಾರಿ ವಿಂಧು ಶ್ರೀ ಸ್ವಯಂ ಸೇವಕಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ನಿರೂಪಿಸಿದರು.