ಇಂಗ್ಲೆಂಡ್ ಸೇನೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವುದಕ್ಕಾಗಿ ಕಾಮನ್‍ವೆಲ್ತ್ ದೇಶಗಳ ಜನರನ್ನೂ ನೇಮಿಸಿಕೊಳ್ಳಲು ಇಂಗ್ಲೆಂಡ್ ಸರಕಾರ ಅನುಮತಿ ನೀಡಿದೆ.
ಇದರಿಂದಾಗಿ ಭಾರತ ಸೇರಿದಂತೆ 53 ದೇಶಗಳ ನಾಗರಿಕರು ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿಲ್ಲದಿದ್ದರೂ, ಸೇನೆಗೆ ಸೇರಲು ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ 5 ವರ್ಷಗಳವರೆಗೆ ಇಂಗ್ಲೆಂಡ್‍ನಲ್ಲಿ ವಾಸಿಸಿದ್ದರೆ ಮಾತ್ರ ಸೇನೆಗೆ ಅರ್ಜಿ ಸಲ್ಲಿಸುವ ಅವಕಾಶವಿತ್ತು. 18 ವರ್ಷಕ್ಕಿಂತ ಮೇಲ್ಪಟ್ಟವರು ಇನ್ನು ಇಂಗ್ಲೆಂಡ್ ಸೇನೆಯ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
2016ರಲ್ಲಿ ಕೆಲವು ಕೌಶಲದ ಹುದ್ದೆಗಳಿಗೆ ವಿನಾಯಿತಿ ನೀಡಲಾಗಿತ್ತಾದರೂ, ಕೇವಲ 200 ಸಿಬಂದಿ ನೇಮಕಕ್ಕೆ ಸೀಮಿತವಾಗಿತ್ತು. ಇದನ್ನೇ ಈಗ ಎಲ್ಲ ಹುದ್ದೆಗಳಿಗೂ ವಿಸ್ತರಿಸಲಾಗಿದೆ.