Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ರಾಜರಾಜೇಶ್ವರೀ ಕ್ಷೇತ್ರ ಪಡುಮಲೆ ದೇವಸ್ಥಾನದಲ್ಲಿ ಶ್ರೀಶರನ್ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ-ಕಹಳೆ ನ್ಯೂಸ್

ಪುತ್ತೂರು : ಶ್ರೀ ರಾಜರಾಜೇಶ್ವರೀ ಕ್ಷೇತ್ರ ಪಡುಮಲೆ ಸನ್ನಿದಿಯಲ್ಲಿ 2ನೇ ವರ್ಷದ ಶ್ರೀ ಶರನ್ನವರಾತ್ರಿ ಮಹೋತ್ಸವವು ದಿನಾಂಕ 03-10-2024 ರಿಂದ 13-10-2024ರ ತನಕ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿರುವುದರಿಂದ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಕೂವೆ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಇಟ್ಟು ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪ್ರರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಶ್ರೀ ಕೂವೆ ವಿಷ್ಣುಮೂರ್ತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಭಟ್ ಚಂದುಕೂಡ್ಲು ಹಾಗೂ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಮನೋಜ್ ರೈ ಪೇರಾಲು ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಮತ್ತು ನವರಾತ್ರಿ ಮಹೋತ್ಸವಸಮಿತಿಯ ಅಧ್ಯಕ್ಷ ಚಂದ್ರಶೇಕರ ಆಳ್ವ ಗಿರಿಮನೆ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಗಿನಮನೆ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶೀ ಕೂವೆ ಶಾಸ್ತಾರ ವಿಷ್ಣುಮೂರ್ತಿದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷರು ರಾಮಣ್ಣ ಗೌಡ ಬಸವಹಿತ್ತಿಲು,ನವರಾತ್ರಿ ಮಹೋತ್ಸವ ಸಮಿತಿಯ ಸದಸ್ಯರಾದ ಪದ್ಮನಾಭ ರೈ ಅರೆಪ್ಪಾಡಿ, ಪುಷ್ಪರಾಜ್ ಆಳ್ವ ಗಿರಿಮನೆ,ರಮೇಶ್ ರೈ ಕೊಯಿಲ, ಉದಯ ಕುಮರ‍್ಶರವು, ಸುಬ್ಬಯ್ಯ ರೈ ಹಲಸಿನಡಿ,ಲೋಕೇಶ್ ರೈ ಮೇಗಿನಮನೆ, ಸುಲೋಚನ ಎಸ್ ನೇರ್ಲಪ್ಪಾಡಿ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.