ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜುನಲ್ಲಿ ಸ್ವಚ್ಛತಾ ಹೀ ಸೇವಾ 2024 ಕಾರ್ಯಕ್ರಮ-ಕಹಳೆ ನ್ಯೂಸ್
ಕಲ್ಲಡ್ಕ : ದಿನಾಂಕ 26-09-2024 ರಂದು ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆದಾಯ ತೆರಿಗೆ ಇಲಾಖೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ 2024 ಕಾರ್ಯಕ್ರಮ ಸಾಧನಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಆದಾಯ ತೆರಿಗೆ ಇಲಾಖೆಯ ನಿರ್ದೇಶಕ ಶ್ರೀ ಸ್ವರೂಪ್ ಮಾರ್ನವ ಇವರು ಕಾಲೇಜಿನ ವಾತಾವರಣ ಮತ್ತು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಚಿತ್ವ ಎಂಬ ಮನೋಭಾವ ಮೊದಲು ಮನೆಯಿಂದ ಆರಂಭವಾದರೆ ಬಳಿಕ ಅದು ಮನೆ, ಸಂಸ್ಥೆಯಲ್ಲಿ ತನ್ನಿಂದ ತಾನೇ ರೂಪುಗೊಳ್ಳುತ್ತದೆ ಎನ್ನುತ್ತಾ ಎಲ್ಲರ ಸಹಕಾರದಿಂದ ಮುಂದೆ ಭೂಮಿಯು ಹಸಿರಾಗಿದ್ದಾರೆ ನಾವು ತಂಪಾಗಿರುತ್ತೇವೆ ಅದಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದರು ಮತ್ತು ಮಂಗಳೂರಿನ ಆದಾಯ ತೆರಿಗೆ ಉಪ ನಿರ್ದೇಶಕ ಶ್ರೀ ರಮಿತ್ ಚೆನ್ನಿತಲ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಶ್ರೀಮಾನ್, ಓSS ಘಟಕದ ನಿರ್ದೇಶಕರಾದ ಶ್ರೀ ಯತಿರಾಜ್ ಶ್ರೀಮಾನ್ ಮತ್ತು ಆದಾಯ ತೆರಿಗೆ ಅಧಿಕಾರಿನ ಶ್ರೀ ಸುನಿಲ್ ಗೋರೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿಸಿಎ ವಿಭಾಗದ ಉಪನ್ಯಾಸಕಿ ಶ್ರೀಮತಿ ತೃಪ್ತಿ ಶೆಟ್ಟಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಕಾಲೇಜಿನ ಎದುರುಗಡೆ ಗಿಡ ನೆಡಲಾಯಿತು ಮತ್ತು ವಿದ್ಯಾಕೇಂದ್ರದ ಸುತ್ತಲೂ ಮತ್ತು ಕಲ್ಲಡ್ಕ ಪೇಟೆಯ ಪರಿಸರದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಕಾಲೇಜಿನ ಓSS ಘಟಕದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಸವನ್ನು ಹೆಕ್ಕಿ ಶುಚಿಗೊಳಿಸಿದರು.