ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕರ‍್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಸಿ. ಎ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “ಮಾಹಿತಿ ತಂತ್ರಜ್ಞಾನ ಸಂಘದ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ ಎ ಎನ್ ಕುಮಾರ್ ನಿವೃತ್ತ ಪ್ರಾಧ್ಯಾಪಕರು , ಕಂಪ್ಯೂಟರ್ ಮತ್ತು ಇಂಜಿನೀಯರಿಂಗ್ ವಿಭಾಗ , ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳು ನೂತನ ಲಾಂಛನವನ್ನು ಅನಾವರಣಗೊಳಿಸಿ ವಿಶೇಷ ಉಪನ್ಯಾಸ ನೀಡಿದರು.
ನಮ್ಮ ದೇಶದ ಯಶಸ್ವಿ ಸಾಧಕರ ಜೀವನ ರಹಸ್ಯವನ್ನು ನಾವು ಅಧ್ಯಯನ ಮಾಡಿದರೆ , ನಮ್ಮ ಪ್ರಯತ್ನದಲ್ಲಿ ಯಾವ ಅಂಶಗಳಿರಬೇಕು ಎಂಬುದು ಮುಖ್ಯ. ಈ ನಿಟ್ಟಿನಲ್ಲಿ , ನಾವು ಆತ್ಮ ವಿಶ್ವಾಸ ಮತ್ತು ದೃಡ ಸಂಕಲ್ಪ ವನ್ನು ಹೊಂದಿದ್ದರೆ ನಮ್ಮ ಬೇಡಿಕೆಯ ಗುರಿಯನ್ನು ತಲುಪುವ ಹಾದಿಯನ್ನು ಸುಗಮಗೊಳಿಸಬಹುದು . ಶಿಸ್ತು ಮತ್ತು ಸಮಯ ಪ್ರಜ್ಞೆಯು ಸಂರ‍್ಭಕ್ಕೆ ಸರಿಯಾಗಿ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಹಕರಿಸುತ್ತದೆ . ಏಕಾಗ್ರತೆಯು ಮಾಡಲಿಚ್ಚಿಸುವ ಕೆಲಸ ಕಾರ್ಯಗಳನ್ನು ಶ್ರದ್ದೆಯಿಂದ ಮತ್ತು ಪರಿಪೂರ್ಣತೆ ತಲುಪಿಸುತ್ತದೆ ಹಾಗೂ ಕಠಿಣ ಪರಿಶ್ರಮವು ನಮ್ಮ ಯಶಸ್ವನ್ನು ಉತ್ತುಂಗಕ್ಕೆ ತಲುಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಯಶಸ್ವಿ ಜೀವನದ ರಹಸ್ಯ ಗಳನ್ನು ತಿಳಿಸಿದರು. ಆಧುನಿಕ ಜೀವನದ ಹೆಚ್ಚುತ್ತಿರುವ ವೇಗ ಮತ್ತು ಬದಲಾವಣೆಯನ್ನು ನಿಭಾಯಿಸಲು, ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಹತಾಶೆಯನ್ನು ಎದುರಿಸುವ ಹೊಸ ಜೀವನ ಕೌಶಲ್ಯಗಳು ಬೇಕಾಗುತ್ತವೆ. ಹೊಸ ಆಲೋಚನೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಂಡು ಜೀವನವನ್ನು ಯಶಸ್ವಿಗೊಳಿಸುವ ಸಾಮರ್ಥ್ಯ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಮ್ಮ
ಅನುಭವದೊಂದಿಗೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷ ರಾದ ಶ್ರೀ ಜಯಂತ್ ನಡುಬೈಲ್ ಮಾಹಿತಿ ತಂತ್ರಜ್ಞಾನ ಸಂಘ ಕ್ಕೆ “ ಬೈಟ್ ಬ್ಲಿಜ್ ಕ್ಲಬ್” ಎಂಬುದಾಗಿರುವ ನೂತನ ಹೆಸರನ್ನು ಅನಾವರಣಗೊಳಿಸಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ಶೀಘ್ರ ಮಾಹಿತಿ ಪಡೆಯುವುದು, ಸ್ಪರ್ಧಾತ್ಮಕವಾಗಿ ಯುಗದಲ್ಲಿ ನಮ್ಮ ತಿಳುವಳಿಕೆಯನ್ನು ನವೀಕರಿಸಿಸುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ ರವರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.