Monday, January 20, 2025
ಸುದ್ದಿ

ಸದ್ದು ಮಾಡುತ್ತಿದೆ ಜೀಜಿರ್ಂಬೆ ಟ್ರೈಲರ್: ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಜಯಮಾಲಾ – ಕಹಳೆ ನ್ಯೂಸ್

ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸಬರ ಅಲೆ ಜೋರಾಗಿ ಸದ್ದು ಮಾಡುತ್ತಿದೆ. ‘ಬಾಲ್ಯ ವಿವಾಹ’ದ ಕಥಾವಸ್ತು ಹೊಂದಿರುವ ‘ಜೀಜಿರ್ಂಬೆ’ ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶನ ಮಾಡಿದ್ದಾರೆ.

ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಬಹಳಷ್ಟು ಸದ್ದು ಮಾಡುತ್ತಿದೆ. ಇದೊಂದು ಸಾಮಾಜಿಕ ಸಂದೇಶವನ್ನೊಳಗೊಂಡ ಚಿತ್ರವಾಗಿದ್ದು, ಹೆಣ್ಣು ಮಕ್ಕಳಲ್ಲಿ ಒಂದು ಸೈಕಲ್ ಹೇಗೆ ಬದಲಾವಣೆ ತಂದು ಅವರಲ್ಲಿ ಸ್ವಾತಂತ್ರ್ಯ ಮತ್ತು ಚಲನಶೀಲತೆ ಉಂಟು ಮಾಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಂಡ ಕಾರಣ ಉತ್ತಮವಾಗಿ ಅರಳಬೇಕಾದ ಅವರ ಜೀವನವನ್ನು ಹೇಗೆ ಮೊಟುಕುಗೊಳಿಸಲಾಗುತ್ತದೆ ಎಂಬ ಕತೆಯನ್ನು ‘ಜೀಜಿರ್ಂಬೆ’ ಹೊಂದಿದೆ. ಈಗಾಗಲೇ ಈ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿವೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ‘ಜೀಜಿರ್ಂಬೆ’ ಚಿತ್ರ ಮೂಡಿಬಂದಿದೆ. ಈ ಚಿತ್ರದ ಬಗ್ಗೆ ಸಚಿವೆ ಜಯಮಾಲ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು