Recent Posts

Sunday, November 17, 2024
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ಚಿತ್ರಪಟ ರಚನೆ ಸ್ಪರ್ಧೆ-ಕಹಳೆ ನ್ಯೂಸ್

ಸುಳ್ಯ:ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್ 26 ಗುರುವಾರದಂದು “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಪಟ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದು ಸ್ಪರ್ಧಿಗಳಿಗೆ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಕೆ ಎನ್, ಬಿಸಿಎ ವಿಭಾಗ ಮುಖ್ಯಸ್ಥೆ ಭವ್ಯ ಪೆರುಮುಂಡ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಾ ಟಿ ಎಸ್ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೇಚರ್ ಕ್ಲಬ್ ಕಾರ್ಯದರ್ಶಿ ಶಿಲ್ಪಾ ಎಸ್, ಸ್ಪರ್ಧಾ ಸಮಿತಿ ಸಂಚಾಲಕ ತೇಜಸ್, ಸಂಯೋಜನಾ ಸಮಿತಿಯ ತನುಷ್ ಮತ್ತು ಕಾರ್ತಿಕ್ ಸ್ಪರ್ಧೆಯನ್ನು ಆಯೋಜಿಸಿದ್ದರು. ಜೀವವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ಅಕ್ಷತಾ ಬಿ, ಕೃತಿಕಾ ಕೆ ಜೆ, ಹರ್ಷಕಿರಣ ಬಿ ಆರ್, ಅಜಿತ್ ಕುಮಾರ್ ಬಿ ಎಸ್, ಪಲ್ಲವಿ ಕೆ ಎಸ್ ಮಾರ್ಗದರ್ಶನ ನೀಡಿದರು. ನೇಚರ್ ಕ್ಲಬ್ ನ ಸದಸ್ಯರಾದ ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.