
ಮಾಣಿ: ಮೊಬೈಲ್ ಟವರ್ ನ ಬ್ಯಾಟರಿ ಸಹಿತ ಬಿಡಿಭಾಗಗಳನ್ನು ಕಳವುಗೈದ ಘಟನೆ ಮಾಣಿ ಪೇಟೆಯಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಮಾಣಿ ನಿವಾಸಿ ಯಾದವ ಶೆಟ್ಟಿರವರು ದೂರುದಾರರಾಗಿದ್ದು, ನಾನು ಮಾಣಿಯ ಬಿಎಸ್ ಎನ್ ಎಲ್ ಟವರ್ ನ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಮೇ. ೧೩ರಂದು ಮಧ್ಯಾಹ್ನ ನನ್ನ ವ್ಯಾಪ್ತಿಯ ಮಾಣಿ ಗ್ರಾಮದ, ಮಾಣಿ ಮುಖ್ಯ ಪೇಟೆಯ, ಬಿಎಸ್‌ಎನ್‌ಎಲ್ ಟವರ್ ಗೆ ಭೇಟಿ ನೀಡಿದಾಗ ಎಂಕ್ಸಚೆAಜ್ ನ ಒಳಗೆ ಇದ್ದ ೨೪ ಟವರ್ ಬ್ಯಾಟರಿ ಸಹಿತ ಇತರ ಬಿಡಿ ಭಾಗಗಳನ್ನು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದುಬಂದಿರುತ್ತದೆ. ಕಳವಾದ ವಸ್ತುಗಳು ಅಂದಾಜು ಮೊತ್ತ ರೂ. ೨,೩೦,೨೪೦ ಆಗಿದೆ ಎಂದು ಯಾದವ ಶೆಟ್ಟಿಯವರು ಸೆ.೨೬ರಂದು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.