Recent Posts

Sunday, January 19, 2025
ಸುದ್ದಿ

ಕಾಂಗ್ರೆಸ್‍ ಯುವ ನಾಯಕ ಮಿಥುನ್ ರೈ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅಮಾನತು – ಕಹಳೆ ನ್ಯೂಸ್

ಮಂಗಳೂರು: ಕರಾವಳಿ ತಡಿಯ ರಾಜಕೀಯದಲ್ಲಿ ಮತ್ತೊಂದು ಅಲೆ ಎದ್ದಿದೆ. ಕಾಂಗ್ರೆಸ್‍ನ ಯುವ ನಾಯಕ ಮಿಥುನ್ ರೈರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅಮಾನತುಗೊಳಿಸಲಾಗಿದೆ.

ಕಳೆದ ವಿಧಾನಸಭೆಯ ಎಲೆಕ್ಷನ್‍ನಲ್ಲಿ ಮೂಡಬಿದ್ರೆಯ ಆಕಾಂಕ್ಷಿಯಾಗಿದ್ದ ಮಿಥುನ್ ಫೀಲ್ಡ್‍ನಿಂದ ಹೊರ ಬಿದ್ದಿದ್ರು. ಹಾಗೇ ಎಂಎಲ್‍ಸಿ ನಡುವೆ ಮುಸುಕಿನ ಗುದ್ದಾಟ ನಡಿತಾ ಇದ್ರು ಕೂಡ ಇದು ತೀವ್ರತೆಗೆ ತಲುಪಿದ್ದು ಆಗಸ್ಟ್ ನಲ್ಲಿ. ಮಂಗಳೂರಿನಲ್ಲಿ ನಡೆದ ಕ್ವಿಟ್ ಇಂಡಿಯಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಿಥುನ್ ಮತ್ತು ಎಂಎಲ್‍ಸಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜಗಳವು ದೇಶಾದಾದ್ಯಂತ ಸುದ್ದಿಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅವಮಾನವಾಗಿತ್ತು. ಇದನ್ನು ಖಂಡಿಸಿದ ಕಾಂಗ್ರೆಸ್ ಮೇಜರ್ ಸರ್ಜರಿ ಕೂಡ ರೆಡಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಂತೆಯೇ ಕಾಂಗ್ರೆಸ್ ಸಂಘಟನೆ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದು ಮತ್ತು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಪಕ್ಷವು ರಾಷ್ಟ್ರೀಯ ಯುವಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯತ್ವದಿಂದ ಮಿಥುನ್ ರೈಗೆ ಕೊಕ್ ನೀಡಿದೆ.

ಹಾಗಂತ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ರವೀಂದ್ರದಾಸ್ ಆರ್ ಆದೇಶವನ್ನೂ ನೀಡಿದ್ದಾರೆ. ಇನ್ನು ಪಕ್ಷದ 19 ಮಂದಿಯನ್ನು ಕೂಡ ಅಮಾನತು ಮಾಡಲಾಗಿರೋದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.