Sunday, January 19, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ – ಅಡ್ಕಬಳೆಯಲ್ಲಿ ಕಾಡಾನೆ ದಾಳಿ ; ಅಪಾರ ಪ್ರಮಾಣದ ಕೃಷಿ ನಾಶ – ಕಹಳೆ ನ್ಯೂಸ್

ಸುಳ್ಯ : ಕಾಡಾನೆ ದಾಳಿ ಕೃಷಿ ನಾಶವಾದ ಘಟನೆ ಅಡ್ಕಬಳೆಯಲ್ಲಿ ಸಂಭವಿಸಿದೆ. ಗಂಗಾಧರ ಗೌಡ, ಲೀಲಾವತಿ ಎಂಬುವವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ನಾಶವಾಗಿದೆ ಎಂದು ತಿಳಿದುಬಂದಿದೆ.

ಈ ಭಾಗದ ಸಾಮಾನ್ಯ ಸಮಸ್ಯೆ ಇದಾಗಿದ್ದು, ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿವೆ. ಅಪಾರ ಪ್ರಮಾಣದ ಕೃಷಿ ನಾಶಗೊಂಡ ಘಟನೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲ ದಿನಗಳ ಹಿಂದೆ ಅರಂಬೂರಿನ ಪರಿವಾರಕಾನದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿದ್ದ ಆನೆಗಳು ಇದೀಗ ಅರಂತೋಡು ಪರಿಸರದಲ್ಲಿ ಕೃಷಿಗೆ ಹಾನಿ ಮಾಡಿದೆ. ಅಡ್ಕಬಳೆಯ ಗಂಗಾಧರ ಗೌಡ, ಲೀಲಾವತಿ ಅಡ್ಕಬಳೆ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿ, ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ನಾಶಪಡಿಸಿರುವುದಾಗಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು