Sunday, January 19, 2025
ದಕ್ಷಿಣ ಕನ್ನಡಮಂಗಳೂರುವಾಣಿಜ್ಯಸುದ್ದಿ

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದವರ ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಂಗಳೂರಿನ ಮಾರುಕಟ್ಟೆಗೆ…!! ಕಾರಿನ ಮೇಲೆ ಆಫರ್‌..!! ವಿಂಡ್ಸರ್‌ ವೈಶಿಷ್ಟ್ಯ..!!- ಕಹಳೆ ನ್ಯೂಸ್

ಮಂಗಳೂರು: ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದವರ ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಅನ್ನು ಶುಕ್ರವಾರ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಕೂಳೂರಿನಲ್ಲಿರುವ ಶೋರೂಂ ಜುಬಿಲೆಂಟ್‌ ಮೋಟಾರ್ನಲ್ಲಿ ಜರಗಿದ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಮುಖ್ಯ ಅತಿಥಿಯಾಗಿದ್ದು ನೂತನ ಕಾರನ್ನು ಅನಾವರಣಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಅವರು, ಹೆಸರಾಂತ ಕಾರು ಬ್ರ್ಯಾಂಡ್ ಅಗಿರುವ ಎಂ.ಜಿ.ಗೆ ನೂರಕ್ಕೂ ಅಧಿ ಕ ವರ್ಷಗಳ ಇತಿಹಾಸ ಇದೆ. ಈಗ ವಿಂಡ್ಸರ್‌ ಲಾಂಚ್‌ ಆಗುತ್ತಿರುವುದು ಖುಷಿ ಕೊಟ್ಟಿದೆ. ದೇಶದ ಎರಡನೇ ಸ್ತರದ ನಗರಗಳಲ್ಲಿ ಅತ್ಯಧಿಕ ಚಿನ್ನ, ಕಾರು ಮಾರಾಟವಾಗುವ ನಗರಗಳಲ್ಲಿ ಮಂಗಳೂರು ಎರಡನೇ ಸ್ಥಾನ ಪಡೆದಿದೆ. ಹಾಗಾಗಿ ಹೊಸ ರೀತಿಯ ಕಾರು ಗ್ರಾಹಕರಿಗೆ ಇಷ್ಟವಾಗಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಇಒ ಜುಬಿಲೆಂಟ್‌ ಮೋಟಾರ್ಸ್‌ ಸಿಇಒ ಸುನಿಲ್‌ ಪೈ ನೂತನ ಕಾರಿನ ಬಗ್ಗೆ ಮಾಹಿತಿ ನೀಡಿ, ಇಂದು ವಾಹನಗಳಿಂದ ಮಾಲಿನ್ಯ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ವಿಂಡ್ಸರ್‌ ಇವಿ ಕಾರು ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ. ಕಾರು ಬಿಡುಗಡೆಗೆ ಮೊದಲೇ, ಅದನ್ನು ಕೇವಲ ಅಂತರ್ಜಾಲದಲ್ಲಿ ವೀಕ್ಷಿಸಿ 30ರಷ್ಟು ಮಂದಿ ಬುಕ್‌ ಮಾಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಚಲನಚಿತ್ರ ನಟರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಪತ್ರಕರ್ತ ವಾಲ್ಟರ್‌ ನಂದಳಿಕೆ, ಕಾರ್ಪೊರೇಟರ್‌ಗಳಾದ ಅನಿಲ್‌ ಕುಮಾರ್‌, ಕದ್ರಿ ಮನೋಹರ ಶೆಟ್ಟಿ, ಜನನಿ ಟೂರ್ ಆಯಂಡ್‌ ಟ್ರಾವೆಲ್ಸ್‌ನ ಮಧುಸೂದನ್‌, ಎಂ.ಜಿ. ದಕ್ಷಿಣ ಮುಖ್ಯಸ್ಥ ಪಾಕ್ಷಲ್‌ ಶಾ, ಎಂ.ಜಿ. ಜುಬಿಲೆಂಟ್‌ ಮೋಟಾರ್ ಉಪಾಧ್ಯಕ್ಷ ವಿಜಯ್‌ ಮಂದಣ್ಣ, ಮಾರಾಟ ಮುಖ್ಯಸ್ಥ ರಾಕೇಶ್‌ ವರ್ಮ ಉಪಸ್ಥಿತರಿದ್ದರು.

ಕಾರಿನ ಮೇಲೆ ಆಫರ್‌ಗಳು
ಮೊದಲ ಮಾಲಕರಿಗೆ ಲೈಫ್‌ಟೈಂ ವಾರಂಟಿ, ಸಿಂಗಲ್‌ ಚಾರ್ಜ್‌ಗೆ 332 ಕಿ.ಮೀ. ದೂರ ಸಂಚಾರ, ಎಂಜಿ ಆಯಪ್‌ ಮೂಲಕ ಒಂದು ವರ್ಷ ಕಾಲ ಉಚಿತ ಚಾರ್ಜಿಂಗ್‌, 3 ವರ್ಷಗಳ ಅಥವಾ 45 ಸಾವಿರ ಕಿ.ಮೀ. ಬಳಿಕ ಅಶ್ಯೂರ್‌x ಶೇ.60 ಬೈಬ್ಯಾಕ್‌.

ವಿಂಡ್ಸರ್‌ ವೈಶಿಷ್ಟ್ಯ
ಈ ಸಿಯುವಿ ಕಾರ್‌ ಏರೋಡೈನಾಮಿಕ್‌ ಫ್ಯೂಚರಿಸ್ಟಿಕ್‌ ಶೈಲಿ ಹೊಂದಿದ್ದು, ವಿಶಾಲವಾದ ಆಂತರಿಕ ಕ್ಯಾಬಿನ್‌, ಆ ಮೂಲಕ ಸುರಕ್ಷೆಯ ಅನುಭವ, ಸ್ಮಾರ್ಟ್‌ ಕನೆಕ್ಟಿವಿಟಿ, ಚಾಲನಾ ಸುವಿಧತೆ, ಏರೋಲಾಂಜ್‌ ಸೀಟ್‌ಗಳನ್ನು 135 ಡಿಗ್ರಿಯಷ್ಟು ವಿಶಾಲವಾಗಿ ಮಡಚಬಹುದು, ಇನ್ಫಿನಿಟಿ ಗ್ಲಾಸ್‌ ರೂಫ್‌, ಗ್ರಾಹಕರ ಮನಸೆಳೆಯುವ ಇನ್ಫೋಟೇನ್‌ಮೆಂಟ್‌, 15.6 ಇಂಚಿನ ಗ್ರ್ಯಾಂಡ್ ವ್ಯೂ ಟಚ್‌ ಡಿಸ್‌ಪ್ಲೇ ಸೆಂಟ್ರಲ್‌ ಕನ್ಸೋಲ್‌ಗ‌ಳನ್ನು ಹೊಂದಿದೆ.

ಎಂಜಿ ವಿಂಡ್ಸರ್‌ ಕಾರು 38 ಕಿ.ವ್ಯಾ. ಲಿಯೋನ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು ಕಾರು ಇಕೊ ಪ್ಲಸ್‌, ಇಕೋ, ನಾರ್ಮಲ್‌,
ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ, ಆ ಮೂಲಕ 332 ಕಿ.ಮೀ. ಸಂಚರಿಸಬಲ್ಲ ಕ್ಷಮತೆ ಪಡೆದಿದೆ.