Sunday, January 19, 2025
ಬೆಂಗಳೂರುಬೆಳಗಾವಿರಾಜಕೀಯರಾಜ್ಯಸುದ್ದಿ

ನಾನು ಸಿಎಂ ಆದ್ರೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಗುಂಡು ಹಾಕ್ತೀನಿ : ಯತ್ನಾಳ್​ – ಕಹಳೆ ನ್ಯೂಸ್

ಬೆಳಗಾವಿ, ಸೆಪ್ಟೆಂಬರ್​ 28: ನಾನು ಮುಖ್ಯಮಂತ್ರಿ ಆದರೆ ಪೊಲೀಸರಿಗೆ AK47 ಗನ್​ ಬಳಕೆಗೆ​​ ಅನುಮತಿ ನೀಡುವೆ.

ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ಬೈಲಹೊಂಗಲದಲ್ಲಿ ನಡೆದ ಗಣೇಶ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕೈಗೆ ಅಧಿಕಾರ ಕೊಡಿ, ಅಲ್ಲಿ ಯೋಗಿ, ಇಲ್ಲಿ ನಾವು ಇರುತ್ತೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದೇ ಒಂದು ಕಲ್ಲು ಬಿದ್ದರೂ ಸೀದಾ ಜನ್ನತ್​​. ಪ್ರಧಾನಿ ಮೋದಿಯವರು ಸಬ್​​ ಕಾ ಸಾಥ್​​, ಸಬ್​ ಕಾ ವಿಕಾಸ್​, ಸಬ್​ ಕಾ ಪ್ರಯಾಸ್​​ ಎಂದು ಹೇಳುತ್ತಾರೆ. ಆದರೆ ನಮ್ಮ ಮಾತು ಬದಲಾಗುತ್ತದೆ. ಹಿಂದೂವೋಂಕೆ ಸಾಥ್,​ ಹಿಂದೂವೋಂಕೆ ವಿಕಾಸ್,​​ ದೇಶ ದ್ರೋಹಿಯೋಂಕೋ ಲಾಥ್ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ಮೋದಿಯವರು ಅಗ್ನಿವೀರರನ್ನು ತಯಾರು ಮಾಡುತ್ತಿದ್ದಾರೆ. ನಾಲ್ಕು ವರ್ಷ ಆದಮೇಲೆ ನಮ್ಮ ಊರುಗಳಿಗೆ ವಾಪಸ್ ಬರುತ್ತಾರೆ. ನಾನು ಸಿಎಂ ಆದರೆ ನಿವೃತ್ತ ಅಗ್ನಿವೀರರಿಗೆ 25 ಲಕ್ಷ ಹಣ ನೀಡುವೆ. ನೀವೆಲ್ಲ ಗಟ್ಟಿಯಾಗಿರಿ ಕರ್ನಾಟಕದಲ್ಲಿ ಹಿಂದೂ ರಾಜ್ಯ ತರೋಣ. ಶಿವಾಜಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರಂತೆ ಆಡಳಿತ ಮಾಡೋಣ. ಸಾಯೋದು ಅಂತು ಪಕ್ಕಾ, ನಾಲ್ಕು ಹೊಡದೇ ಹೋಗುತ್ತೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದರು.

ಸಿಎಂ ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸಿದ್ದರಾಮಯ್ಯ ತಲೆಗೆ ಪೇಟ ಇಟ್ಟರೆ ಕಿತ್ತು ಹಾಕುತ್ತಿದ್ದರು. ಸಿದ್ದರಾಮಯ್ಯನವರೆ ಈಗ ಯಾಕೆ ಚಾಮುಂಡಿ ದರ್ಶನಕ್ಕೆ ಹೋಗುತ್ತೀರಿ? ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಪಡೆಯುತ್ತಾರೆ, ಆದರೆ ಮುಸ್ಲಿಮರ ಪರ ಕೆಲಸ ಮಾಡುತ್ತಾರೆ. ಎಸ್​ಟಿ, ಎಸ್​​ಸಿ ಸಮುದಾಯದ ಹಣ ನುಂಗಿದ್ದೀರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿ ನೀರು ಕುಡಿದ್ರಿ. ಹಾಲುಮತದ ಸಮುದಾಯಕ್ಕೆ ಈವರೆಗೂ ಏನೂ ಮಾಡಿಲ್ಲ. ಆದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ. ಯಾರ ಅಪ್ಪನ ಮನೆಯಿಂದ ಹಣ ಕೊಡುತ್ತೀರಿ ಎಂದು ಪ್ರಶ್ನಿಸಿದರು.

 

ತೆರಿಗೆ ತುಂಬುವುದು ನಾವು ಪುಕ್ಸಟ್ಟೆ ಹಡಿಯೋದು ಅವರು. ನಾವು ಒಂದೇ ಮದುವೆಯಾಗಿ ಎರಡು ಮಕ್ಕಳು ಮಾಡುತ್ತೇವೆ. ಅವರು ಹಮ್​ ಪಾಂಚ್​ ಹಮಾರೆ ಪಚೀಸ್​​ ಅಂತಾರೆ. ಈಗ ಸಮಾನ ನಾಗರಿಕತೆ ಕಾನೂನು ಜಾರಿಗೆ ತರೋದಿದೆ. ಹಾಲುಮತ, ಲಿಂಗಾಯತ, ದಲಿತರು ಎಂಬುದನ್ನು ಬಿಡಬೇಕು. ನಾವೆಲ್ಲ ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡಿದರು.

ಹಿಂದೂಗಳು ಈ ದೇಶದಲ್ಲಿ ಗುಲಾಮಾರಾಗಿ ಜೀವನ ಮಾಡುವ ಪರಿಸ್ಥಿತಿಯಿದೆ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿರದಿದ್ದರೆ, ನಮ್ಮನ್ನು ಅತ್ಯಂತ ನಿರ್ದಿಷ್ಟ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತಿತ್ತು. ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದವರು, ಕಲ್ಲು ಒಗೆದವರು ಅವರು. ಆದರೆ, 1 ರಿಂದ 32ವರೆಗೂ ಹಿಂದೂ ಯುವಕರು ಆರೋಪಿಗಳು. ಎ33ರಿಂದ ಅವರು. ತಿರುಪತಿ ಲಾಡುವಿನಲ್ಲಿ ದನ ಕೊಬ್ಬು, ಮೀನನ ಎಣ್ಣೆ ಹಾಕಿದರು. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಇದ್ದಾಗ ತಿರುಪತಿ ಅಪವಿತ್ರ ಮಾಡಿದ್ದರು. ಇನ್ನೂ ನಮಗೆ ಬುದ್ಧಿ ಬಂದಿಲ್ಲ ಎಂದರು.

ನಾವು ಗ್ಯಾರಂಟಿ ಅಂದ ತಕ್ಷಣವೇ ವೋಟ್ ಹಾಕುತ್ತೇವೆ. ಎರಡು ಸಾವಿರ ಕೊಡುತ್ತಾರೆ ಅಂದ್ರೆ ವೋಟ್ ಹಾಕುತ್ತೇವೆ. ಹೀಗೆ ಮಾಡಿದರೆ ಹಿಂದೂಗಳೇ ಉಳಿಯುವುದಿಲ್ಲ. ಹಿಂದೂಗಳು ಎರಡು ಸಾವಿರಕ್ಕೆ ಹೋಗುತ್ತೀರಾ. ಲಕ್ಷ್ಮೀ ಅಕ್ಕಾ ನಿಮಗೆ ಎರಡು ಸಾವಿರದಲ್ಲೇ ಬರ್ಬಾದ್ ಮಾಡಿದರು. ಆದಷ್ಟು ಜಲ್ದಿ ನಿಮಗೆ ಚಾಂದಬೇಬಿ ಮಾಡ್ತಾಳೆ ಎಂದು ಸಚಿವೆ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ಮಾಡಿದರು.

ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಮುಸ್ಲಿಮರ ಸರ್ಕಾರ. ನಾವು ಹಿಂದೂಗಳು ಒಂದಾಗಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಅವಾಗಲೇ ಹೇಳಿದ್ದಾರೆ. ಹಿಂದೂಗಳು ಸುರಕ್ಷಿತ ಜೀವನ ಮಾಡಬೇಕಾದರೆ, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು, ಅಲ್ಲಿರುವ ಹಿಂದೂಗಳನ್ನು ಇಲ್ಲಿ ಕಳಿಸಬೇಕು. ಅಂದ್ರೆ ಮಾತ್ರ ಹಿಂದೂಗಳು ಸುರಕ್ಷಿತವಾಗಿ ಇರುತ್ತಾರೆ. ಹಿಂದೂಸ್ತಾನ್​ದಲ್ಲಿ ಇರಬೇಕಾದರೆ, ಒಂದೇ ಮಾತರಂ ಅಂತ ಹೇಳಬೇಕು ಎಂದರು.