Saturday, April 5, 2025
ದಕ್ಷಿಣ ಕನ್ನಡಸುದ್ದಿ

ಮಿತ್ತಡ್ಕದ ಮಹಿಳೆ ಕಾಣೆ ; ಬಾವಿಯಲ್ಲಿ ಹುಡುಕಾಟ-ಕಹಳೆ ನ್ಯೂಸ್

ಅರಂತೋಡು: ಮರ್ಕಂಜದ ಮಿತ್ತಡ್ಕ ಮೋಹನ ಅವರ ಪತ್ನಿ ಶೋಭಾಲತಾ ಅವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಹುಡುಕಾಟ ಶುಕ್ರವಾರ ಆರಂಭಗೊಂಡಿದೆ.
ಅವರು ಬಾವಿಗೆ ಹಾರಿರಬಹುದು ಎನ್ನುವ ಶಂಕೆಯಲ್ಲಿ ಬಾವಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರ ಅಗ್ನಿಶಾಮಕ ದಳದ ಉಪಸ್ಥಿತಿಯಲ್ಲಿ ಬಾವಿಯ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು.

ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಶೀಲ್ದಾರ್ ಅವರು ಹಿಟಾಚಿ ಯಂತ್ರದ ಮೂಲಕ ಮಣ್ಣು ಅಗೆಯಲು ಸೂಚನೆ ನೀಡಿದರು. ಅದರಂತೆ ಹಿಟಾಚಿ ಯಂತ್ರ ಬಂದು ಮಣ್ಣು ತೆಗೆಯುವ ಕಾರ್ಯಾಚರಣೆ ಆರಂಭವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ