Friday, November 22, 2024
ಸುದ್ದಿ

ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳ ನೇಮಕ – ಕಹಳೆ ನ್ಯೂಸ್

ತಿರುವನಂತಪುರಂ: ಇದೇ ಮೊದಲ ಬಾರಿಗೆ ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ. ಋತುಸ್ರಾವದ ಮಹಿಳೆಗೆ ಪ್ರವೇಶಕ್ಕೆ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮುಂದಾದಾಗ ಅವರನ್ನು ತಡೆಯಲು ಮಹಿಳಾ ಪೇದೆಗಳು ಇರಬೇಕಾಗುತ್ತದೆ ಎಂಬ ಉದ್ದೇಶದಿಂದ 50ರ ಗಡಿದಾಟಿದ ಮಹಿಳೆಯರನ್ನು ನೇಮಕಮಾಡಲಾಗಿದೆ.

ದೇವಾಸ್ಥಾನದ ಕರ್ತವ್ಯಕ್ಕೆ ನಿಯೋಜನೆ ಆದರೂ ಈ ಮಹಿಳೆಯರಿಗೆ ದೇವರ ದರ್ಶನ ಮಾತ್ರ ನೀಡಲಾಗಿಲ್ಲ. ದೇವಾಲಯದ ಹೊರಗಡೆ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಮಹಿಳೆ ಪೇದೆಯೊಬ್ಬರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಪೂಜೆ ಹಿನ್ನಲೆ ದೇವಸ್ಥಾನ ತೆರೆಯಲಾಗಿದ್ದು, ನಾಳೆ ರಾತ್ರಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು. ಈ ಹಿಂದೆ ದೇವಸ್ಥಾನ ತೆರೆದಾಗ 12 ಮಹಿಳೆಯರು ದೇವರ ದರ್ಶನ ಪಡೆಯಲು ಮುಂದಾದರೂ ಆದರೆ, ಪ್ರತಿಭಟನಾಕಾರರು ತಡೆಯೊಡ್ಡಿದ ಹಿನ್ನಲೆ ಅವರ ಪ್ರಯತ್ನ ವಿಫಲವಾಯಿತು.

ಮಹಿಳೆಯರ ಪ್ರವೇಶವನ್ನು ರಾಷ್ಟ್ರದ ಎರಡು ರಾಜಕೀಯ ಪಕ್ಷಗಳು ರಾಜಕೀಯ ವಿಷಯವನ್ನಾಗಿ ಸ್ವೀಕರಿಸಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಇದುವರೆಗೂ ಯಾವುದೇ ಮಹಿಳೆಯರು ಚಿನ್ನದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ.