Sunday, January 19, 2025
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಪಾಕ್​ನಲ್ಲಿ ಶೇ 82 ಮಹಿಳೆಯರು ತಂದೆ, ಸಹೋದರ, ಅಜ್ಜ, ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಾಗುತ್ತಾರೆ : ಪಾಕ್ ಸಂಸದೆ ಷಂಡನಾ ಗುಲ್ಜಾರ್ ಖಾನ್ – ಕಹಳೆ ನ್ಯೂಸ್

ಡೀ ಹೆಣ್ಣು ಕುಲವೇ ತಲೆ ತಗ್ಗಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ. ಪಾಕ್​​ ಸಂಸದೆ ಟಿವಿ ಡಿಬೆಟ್​​ನಲ್ಲಿಟ್ಟ ಆ ಒಂದು ದಾಖಲೆ ಈಗ ಇಡೀ ಪಾಕಿಸ್ತಾನವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕ್​​ ಮಹಿಳೆಯರ ಮೇಲೆ ಅವರ ಮನೆಯ ಪುರುಷರೇ ಅತ್ಯಾಚಾರ ಮಾಡಿರುವ ಬಗ್ಗೆ ಎಳೆಎಳೆಯಲ್ಲಿ ದಾಖಲೆ ಇಟ್ಟಿದ್ದಾರೆ.
ಈ ಬಗ್ಗೆ ಇಲ್ಲಿದೆ ಮಾಹಿತಿಪಾಕಿಸ್ತಾನದ ಸಂಸದೆ​​​​ ಒಂದು ಅಚ್ಚರಿ ಹಾಗೂ ಇಡೀ ಪಾಕ್​​​ ನಾಚಿಗೆ ಪಡುವ ದಾಖಲೆಯೊಂದನ್ನು ಟಿವಿ ಡಿಬೆಟ್​​​ ಮೂಲಕ ಜನರ ಮುಂದೆ ಇಟ್ಟಿದ್ದಾರೆ. ಪಾಕ್​​ ಗಂಡಸರು ಒಂದು ಹೆಣ್ಣನ್ನು ಅದರಲ್ಲೂ ತಮ್ಮ ಸಹೋದರಿಗೆ, ತಾಯಿಯನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬ ಸತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಟಿವಿ ಡಿಬೆಟ್​​​ನಲ್ಲಿ ಪಾಕ್​​​​ ಸಂಸದೆ​​​​ ಇಟ್ಟಿರುವ ಈ ದಾಖಲೆಯ ಸತ್ಯಕ್ಕೆ ಸೋಶಿಯಲ್​​ ಮೀಡಿಯಾದಲ್ಲಿ ಪಾಕಿಸ್ತಾನದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನದಲ್ಲಿ 82% ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲ್ಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅತ್ಯಾಚಾರ ಆಗಿರುವ ಮಹಿಳೆಯರೇ ಹೇಳಿದ್ದಾರೆ. ಅವರ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪ ಇವರಿಂದಲೇ ನಾವು ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ಹೇಳಿದ್ದಾರೆ. ವಾರ್ ಆನ್ ರೇಪ್ (WAR) ಸಂಸ್ಥೆಯ ವರದಿಯನ್ನು ಸಂಸದೆ ಷಂಡನಾ ಗುಲ್ಜಾರ್ ಖಾನ್ ಟಿವಿ ಶೋವೊಂದರಲ್ಲಿ ಜನರ ಮುಂದೆ ಇಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋ ಇಲ್ಲಿದೆ ನೋಡಿ:

 

 

 

ಹೆಚ್ಚಿನ ಹುಡುಗಿಯರ ಮೇಲೆ ಅವರ ಮನೆಯ ಸದಸ್ಯರೇ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಈ ದಾಖಲೆಯನ್ನು ನೀಡಿರುವ ಗುಲ್ಜಾರ್ ಒಬ್ಬ ರಾಜಕಾರಣಿಯಾಗಿದ್ದು, ಸಂಸದೆ ಕೂಡ ಹೌದು, ಆಗಸ್ಟ್ 2018 ರಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಒಬ್ಬ ಸಂಸದೆಯೇ ದಾಖಲೆ ಸಹಿತ ಸಾಕ್ಷಿಯನ್ನು ನೀಡಿರುವ ಕಾರಣ ಪಾಕ್​​ನಲ್ಲಿ ಈ ಬಗ್ಗೆ ತಲ್ಲಣ ಸೃಷ್ಟಿಯಾಗಿದೆ.

ಇನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಗರ್ಭಿಣಿಯಾಗುತ್ತಾರೆ. ಅವರು ಯಾವ ಕಾರಣಕ್ಕೂ ಪೊಲೀಸರಿಗೆ ಈ ಬಗ್ಗೆ ದೂರು ನೀಡುವುದಿಲ್ಲ. ಬದಲಿಗೆ ಗರ್ಭಪಾತ ಮಾಡಿಕೊಳ್ಳಲು ಸ್ತ್ರೀರೋಗತಜ್ಞರ ಬಳಿ ಹೋಗುತ್ತಾರೆ. ಮಗಳ ಮೇಲೆ ತನ್ನ ಗಂಡ ಅತ್ಯಾಚಾರ ಮಾಡಿದ್ರು ಆಕೆ ತನ್ನ ಗಂಡನನ್ನು ಬಿಡುವುದಿಲ್ಲ. ಈ ಕಾರಣಕ್ಕೆ ತಾಯಿ ತನ್ನ ಮಗಳ ಮೇಲೆ ಅತ್ಯಾಚಾರ ಅದರೂ ಅದನ್ನು ಪ್ರತಿಭಟಿಸುವುದಿಲ್ಲ, ಪೊಲೀಸರಿಗೆ ದೂರು ನೀಡುವುದಿಲ್ಲ. ಈ ಬಗ್ಗೆ ಪಾಕಿಸ್ತಾನದಲ್ಲಿ ಯಾರೊಬ್ಬರು ಮಾತನಾಡುವುದಿಲ್ಲ, ಅದಕ್ಕಾಗಿ ಪ್ರತಿಭಟಿಸಲು ಯಾರು ಮುಂದೆ ಬರುವುದಿಲ್ಲ. ಯಾಕೆಂದರೆ ಜೀವ ಭಯ ಎಂದು ಸಂಸದೆ ಹೇಳಿದ್ದಾರೆ.