Sunday, January 19, 2025
ಸುದ್ದಿ

ನವೆಂಬರ್ 10 ಮತ್ತು 11 ರಂದು ಕೃಷಿ ಮೇಳ ಹಾಗೂ ಕೃಷಿ ವಸ್ತು ಪ್ರದರ್ಶನ – ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ಯುವಕರು ಉದ್ಯೋಗ ಅರಸಿಕೊಂಡು ನಗರದತ್ತ ಮುಖಮಾಡೋದು ಸಾಮಾನ್ಯ. ಬೇಸಾಯ ಅಂದ್ರೆ ಮೂಗು ಮುರಿಯೋರೆ ಹೆಚ್ಚು.ವ್ಯವಸಾಯದ ಕಡೆ ಯುವಕರನ್ನ ಆಕರ್ಷಿಸುವ ನಿಟ್ಟಿನಲ್ಲಿ ಕೃಷಿ ಮೇಳ ಅಭೂತ ಪೂರ್ವ ಸಾಧನೆ ಮಾಡಿದೆ ಎಂದರೆ ತಪ್ಪಾಗಲಾರದು.

ಯುವಕರು ಕೃಷಿಯತ್ತ ಚಿತ್ತ ಹರಿಸುವ ಧ್ಯೇಯದೊಂದಿಗೆ ಕೃಷಿ ಮೇಳಗಳು ಆರಂಭಗೊಂಡವು.ನಗರೀಕರಣ ಭರಾಟೆಯಲ್ಲಿ ವ್ಯವಸಾಯದ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಸಿಪಿಸಿಆರ್‍ಐ ಸಹಯೋಗದಲ್ಲಿ ಕೃಷಿ ಮೇಳವು ಕಡಬ ತಾಲೂಕಿನ ಕಿದುವಿನಲ್ಲಿರುವ ಇದೇ ನವೆಂಬರ್ 10 ಮತ್ತು 11 ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಪಿಸಿಆರ್‍ಐನ ತೆಂಗು ವಂಶಾಭಿವೃದ್ಧಿ ಸ್ಥಳದಲ್ಲಿ ಕೃಷಿ ಸಲಕರಣೆ, ಕೃಷಿ ಸಂರಕ್ಷಣೆ, ಗೊಬ್ಬರ ಇನ್ನಿತರ ಕೃಷಿ ಸಂಬಂಧಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ವಿರೇಂದ್ರ ಹೆಗ್ಡೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾಕ್ಟರ್ ಹರ್ಷವರ್ಧನ, ಸಂಸದ ನಳೀನ್ ಕುಮಾರ್ ಕಟೀಲು, ಯು.ಟಿ ಖಾದರ್, ಎಸ್ ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಾಗೂ ತಾಲೂಕಿನ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.