Sunday, January 19, 2025
ರಾಜಕೀಯಸುದ್ದಿ

ಬಳ್ಳಾರಿ ಭದ್ರಕೋಟೆಯಲ್ಲಿ 14 ವರ್ಷಗಳ ನಂತರ ಕಾಂಗ್ರೆಸ್ ಬಾವುಟ – ಕಹಳೆ ನ್ಯೂಸ್

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರಾಲೋಚನೆ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ರಣವ್ಯೂಹ ಬಿಜೆಪಿಯವರನ್ನು ಚಿತ್ರಾನ್ನ ಮಾಡಿದ್ದು, ಬಳ್ಳಾರಿಯ ಭದ್ರಕೋಟೆಯನ್ನು 14 ವರ್ಷಗಳ ನಂತರ ಭೇದಿಸಿ ನಂತರ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿದೆ.

ಐದು ಕ್ಷೇತ್ರಗಳ ಉಪಚುನಾವಣೆ ಪೈಕಿ ಬಳ್ಳಾರಿ ಮತ್ತು ಮಂಡ್ಯ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಕನ್ನಡಿಯಷ್ಟು ಸ್ಪಷ್ಟವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಹೇಳಲಾಗುತ್ತಿದ್ದರೂ ಕೊನೆ ಕ್ಷಣದಲ್ಲಿ ಒಂದಷ್ಟು ಗೊಂದಲಗಳಾದವು. ಆದರೆ ಅಂತಿಮವಾಗಿ ಜಮಖಂಡಿ ಕೂಡ ಕಾಂಗ್ರೆಸ್ ಪಾಲಿಗೆ ಒಲಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳ್ಳಾರಿ ಲೋಕಸಭೆ ಚುನಾವಣೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿತ್ತು.1999ರಲ್ಲಿ ಸೋನಿಯಾಗಾಂಧಿಯವರು ಸ್ಪರ್ಧಿಸಿ ಜಯಗಳಿಸಿ ನಂತರ ರಾಜೀನಾಮೆ ನೀಡಿದ್ದರಿಂದ 2004ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಕೊಲ್ಲೂರು ಬಸವನಗೌಡ ಆಯ್ಕೆಯಾಗಿದ್ದನ್ನು ಬಿಟ್ಟರೆ ಅನಂತರ ನಡೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ ನಿರ್ನಾಮವಾಗಿತ್ತು.