Sunday, January 19, 2025
ಕ್ರೈಮ್ಬೆಂಗಳೂರುಸಿನಿಮಾಸುದ್ದಿ

ರೇಣುಕಾಸ್ವಾಮಿ ಕೇಸ್​​, ದರ್ಶನ್​​ ಬೆನ್ನಲ್ಲೇ ಪವಿತ್ರಾ ಗೌಡಗೂ ಶಾಕ್..!! – ಕಹಳೆ ನ್ಯೂಸ್

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ A-1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿ ಇದೀಗ ಕೋರ್ಟ್​ ಆದೇಶಿಸಿದೆ.

ಆರೋಪಿ ನಟ ದರ್ಶನ್​ ಜಾಮೀನು ಅರ್ಜಿಯನ್ನೂ ಅದೇ ದಿನಾಂಕಕ್ಕೆ ನ್ಯಾಯಾಲಯ ಈಗಷ್ಟೇ ಮುಂದೂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದರ್ಶನ್​ ಬೆನ್ನಲ್ಲೇ ಪವಿತ್ರಾಗೌಡೂ ಇದೀಗ ಬೇಲ್​ ಸಿಗದೇ ಆಘಾತವಾಗಿದೆ. ಇದಲ್ಲದೇ ರವಿಶಂಕರ್ ಹಾಗೂ ಲಕ್ಷ್ಮಣ್ ಎಂಬ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯೂ ಕೋರ್ಟ್​ ಮುಂದೂಡಿ ಆದೇಶ ನೀಡಿದೆ.

57ನೇ ಸಿಸಿಹೆಚ್ ಕೋರ್ಟ್​​​ನ ನ್ಯಾ.ಜೈಶಂಕರ್ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವನ್ನು ಎಸ್​​​​ಪಿಪಿ ಪ್ರಸನ್ನ ಕುಮಾರ್ ಕೋರಿದ್ದ ಹಿನ್ನೆಲೆಯಲ್ಲಿ ಇಂದಿಗೆ ವಿಚಾರಣೆ ಮುಂದೂಡಲಾಗಿತ್ತು. ಈಗಾಗಲೇ ಕೊಲೆ ಕೇಸ್​​​ನಲ್ಲಿ ಕೇವಲ ಮೂವರು ಆರೋಪಿಗಳಿಗೆ ಬೇಲ್​ ಸಿಕ್ಕಿದೆ.