Friday, September 20, 2024
ಕ್ರೀಡೆಸುದ್ದಿ

ಕಬಡ್ಡಿ ಆಟಗಾರ ಅಮರೇಶ್ ಮೊಂಡಲ್‍ ಸಾಧನೆ – ಕಹಳೆ ನ್ಯೂಸ್

ಕಬಡ್ಡಿ ದೇಶದಲ್ಲಿ ಕಬಡ್ಡಿ ಆಟವನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ, ಕ್ರೀಡಾಪಟುಗಳು ದೇಸಿ ಕ್ರೀಡೆಯನ್ನು ವೃತ್ತಿ ಬದುಕಾಗಿ ತೆಗೆದುಕೊಳ್ಳುವಷ್ಟು. ಅದರಲ್ಲೂ ಅಮರೇಶ್ ಮೊಂಡಲ್‍ರಂತಹ ಆಟಗಾರರ ಕಥೆ ಮತ್ತಷ್ಟು ಜನರನ್ನು ಕಬಡ್ಡಿಯತ್ತ ಸೆಳೆಯಲಿದೆ.

ಕಾರಣ, ಇವರು ರಗ್ಬಿ ಆಟವನ್ನು ತೊರೆದು ಕಬಡ್ಡಿಗೆ ಬಂದಿದ್ದಾರೆ.ಅಮರೇಶ್ ಸಾಧನೆ ಹಿಂದೆ ಕರುಣಾಜನಕ ಕಥೆ ಇದೆ. ಇವರು ಜನಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಣ್ಣ ವಯಸ್ಸಿನಲ್ಲೇ ತಾಯಿಯೂ ಪ್ರಾಣ ಬಿಟ್ಟರು. ಅಜ್ಜಿ, ತಾತನ ಜತೆಯೇ ಬೆಳೆದ ಅಮರೇಶ್‍ರದ್ದು ಬಡ ಕುಟುಂಬ. ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬಾಂಗಾಂವ್ ಎನ್ನುವ ಹಳ್ಳಿ ಇವರದ್ದು.

ಜಾಹೀರಾತು

ಇವರ ಊರಿನಿಂದ ಬಾಂಗ್ಲಾ ಗಡಿ ಕೇವಲ 5 ನಿಮಿಷ ಪ್ರಯಾಣ ಮಾತ್ರವಂತೆ. ಜೀರ್ಣಿಸಿಕೊಳ್ಳಲು ಅಸಾಧ್ಯವಾಗುವಂತಹ ಮಧ್ಯಾಹ್ನದ ಬಿಸಿಯೂಟ ನೀಡುವ ಶಾಲೆಯಲ್ಲಿ ಕಲಿತ ಅಮರೇಶ್‍ರದ್ದು ಅತ್ಯಂತ ನಿರ್ಲಕ್ಷಿತ ಹಳ್ಳಿ.

ಕೊಳಚೆ ನೀರು, ಕೆಸರು ಮೈದಾನಗಳಲ್ಲೇ ಆಡಿ ಬೆಳೆದ ಅವರು, ತಮ್ಮ ಸೋದರ ಸಂಬಂಧಿಯೊಬ್ಬ ಆಸ್ಪ್ರೇಲಿಯಾದಲ್ಲಿ ರಗ್ಬಿ ಆಟಗಾರನಾಗಿದ್ದ ಕಾರಣ, ತಾವು ಸಹ ಆಸ್ಪ್ರೇಲಿಯಾಗೆ ತೆರಳಿದರು.