Recent Posts

Thursday, November 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ. ಜೀವನ್ ರಾಮ್ ಸುಳ್ಯ-ಕಹಳೆ ನ್ಯೂಸ್

ಪುತ್ತೂರು: ತರಗತಿಯ ಒಳಗಡೆ ಆಗುವ ಪಾಠ ಮಾತ್ರ ಶಿಕ್ಷಣವಲ್ಲ, ತಮ್ಮನ್ನು ತಾವು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಕೂಡಾ ಒಂದು ಶಿಕ್ಷಣವೇ. ನಮ್ಮ ದೇಶದ ಶ್ರೀಮಂತಿಕೆ ಆರ್ಥಿಕ ಸ್ಥಿತಿಯಲ್ಲಿಲ್ಲ. ಬದಲಾಗಿ ಸರ್ವ ಕಲೆಗಳಲ್ಲಿ ಅಡಗಿದೆ. ಕಲಾವಿದರಾಗದೆ ಇದ್ದ ಪಕ್ಷದಲ್ಲಿ ಸೌಂದರ್ಯ ಪ್ರಜ್ಞೆಯುಳ್ಳ ಪ್ರೇಕ್ಷಕರಾದರೆ ಅದುವೇ ಸಾಂಸ್ಕೃತಿಕ ಲೋಕಕ್ಕೆ ನೀಡುವ ಬಹುದೊಡ್ಡ ಕೊಡುಗೆ. ಸಾಂಸ್ಕೃತಿಕ ಕಲೆಗಳಿಗೆ ಜಾತಿ, ಧರ್ಮ, ಭಾಷೆ ಇದರ ಯಾವುದೇ ಚೌಕಟ್ಟು ಇಲ್ಲ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕಲೆಗಿದೆ. ಎಲ್ಲಿ ಸಾಂಸ್ಕೃತಿಕ ವಾತಾವರಣ ಇರುತ್ತದೋ ಅಲ್ಲಿ ಜೀವನೋತ್ಸಹ ಇರುತ್ತದೆ ಎಂದು ರಾಷ್ಟ್ರೀಯ ರಂಗಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಹಾಗೂ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ, ಸುಳ್ಯ ಇದರ ಅಧ್ಯಕ್ಷ ಡಾ. ಜೀವನ್ ರಾಮ್ ಸುಳ್ಯ ಹೇಳಿದರು.
ಇವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಲಲಿತ ಕಲಾ ಸಂಘ ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಲಲಿತಕಲಾ ಸಂಘದ 2024-25 ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನೆ ಹಾಗೂ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಗಳ ಶುಭಾರಂಭ ಪ್ರತಿಭೋತ್ಸವ 2024-25 ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ ನಮ್ಮ ಕಾಲೇಜು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಲೆಯನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಂಡು ಅದರೊಂದಿಗೆ ಕಲೆಯನ್ನು ಬೆಳೆಸುವ ಪ್ರೇಕ್ಷಕರು ನಾವಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸುಮಾರು 16 ತಂಡಗಳಿAದ ಅಂತರ್ ತರಗತಿಗಳ ಸಾಂಸ್ಕೃತಿಕ ಸ್ಪರ್ಧೆಗಳ ವೈಭವ ನಡೆಯಿತು.ಪದವಿ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪ್ರಥಮ ಬಿಕಾಂ, ದ್ವಿತೀಯ ಬಹುಮಾನವನ್ನು ತೃತೀಯ ಬಿಎ ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಬಿಎಸ್ಸಿ ತಂಡ ಪಡೆದುಕೊಂಡಿತು. ಸ್ನಾತಕೋತ್ತರ ವಿಭಾಗದಲ್ಲಿ ಎಂಕಾA ತಂಡ ಪ್ರಥಮ, ಎಂಸಿಜೆ ಹಾಗೂ ಎಂಎಸ್ಸಿ ತಂಡ ಪಡೆದುಕೊಂಡಿದೆ.
ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಲಲಿತ ಕಲಾಸಂಘದ ಸಂಯೋಜಕ ಡಾ. ಮನಮೋಹನ್ ಎಂ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು