Wednesday, October 2, 2024
ದಕ್ಷಿಣ ಕನ್ನಡಸುದ್ದಿಸುಳ್ಯ

ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ-ಕಹಳೆ ನ್ಯೂಸ್

ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 01 ಮಂಗಳವಾರದAದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಣಿಪಾಲ ಸಂಶೋದನಾ ಕೇಂದ್ರದಲ್ಲಿ ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಪದವಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದಿದ್ದ ಕು. ಪ್ರಮೀತ, ದೀಪ ಬೆಳಗಿದ ನಂತರ ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಕಾಮನ ಬಿಲ್ಲಿನ ಬಣ್ಣಗಳನ್ನು ಉತ್ಪಾದಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ “ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನದ ಪ್ರವೃತ್ತಿಗಳು” ವಿಷಯದ ಕುರಿತಾಗಿ ಬಹಳ ಉತ್ತಮವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.

ಜಾಹೀರಾತು
ಜಾಹೀರಾತು

ಕಾಲೇಜಿನ ಆಡಳಿತ ಅಧಿಕಾರಿಯಾಗಿರುವ ಚಂದ್ರಶೇಖರ ಪೇರಾಲು ಮಾತನಾಡಿ ವಿಜ್ಞಾನ ಸಂಘದ ಮುಂದಿನ ಚಟುವಟಿಕೆಗಳಿಗೆ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎA ವಹಿಸಿದ್ದರು.

ವಿಜ್ಞಾನ ಸಂಘದ ಸದಸ್ಯರಾದ ಕು. ಶಿಲ್ಪ ಮತ್ತು ತಂಡದವರು ಪ್ರಾರ್ಥಿಸಿ, ವಿಜ್ಞಾನ ಸಂಘದ ಅಧ್ಯಕ್ಷೆ ಕು. ಸೌಮ್ಯ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಸತ್ಯಪ್ರಕಾಶ್ ದೇರಪ್ಪಜ್ಜನಮನೆ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನ ಸಂಘದ ಖಜಾಂಜಿ ಕಾರ್ತಿಕ್ ಉದ್ಘಾಟಕರನ್ನು ಪರಿಚಯಿಸಿ, ಕಾರ್ಯದರ್ಶಿ ಕು. ರಕ್ಷಿತಾ ವಂದಿಸಿದರು. ಕು. ಉಜಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಉಷಾ ಎಂ ಪಿ, ಸಂಜೀವ ಕೆ, ಅಕ್ಷತಾ, ಕುಲದೀಪ್, ದೀಕ್ಷಾ, ಅಶ್ವಿನಿ, ಕೃತಿಕಾ, ಹರ್ಷಕಿರಣ, ಅಜಿತ್ ಕುಮಾರ್ ಮತ್ತು ಪಲ್ಲವಿ ಹಾಗೂ ಸಿಬ್ಬಂದಿಗಳಾದ ಜಯಂತಿ, ಸೌಮ್ಯ, ಗೀತಾ, ಭವ್ಯ ಮತ್ತು ಶಿವಾನಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.