ಅಗ್ನಿವೀರ ಪಡೆಯೊಂದಿಗೆ ಶಾಸಕ ಡಾಕ್ಟರ್ ಭರತ್ ಶೆಟ್ಟಿ, ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ಸಂಸ್ಮರಣೆ,ಸ್ವಚ್ಛತಾ ಅಭಿಯಾನ -ಕಹಳೆ ನ್ಯೂಸ್
ಕಾವೂರು : ರಾಷ್ಟ್ರ ಪಿತಾ ಮಹಾತ್ಮ ಗಾಂಧಿ ಹಾಗೂ ದೇಶದ ಪ್ರಸಿದ್ಧ ಪ್ರಧಾನಿಗಳಲ್ಲಿ ರ‍್ವರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಪ್ರಯುಕ್ತ ಶಾಸಕರಾದ ಡಾ. ಭರತ್ ಶೆಟ್ಟಿ ವೈಅವರು ದೇಶದ ಯೋಧರಾದ ಅಗ್ನಿವೀರ ಪಡೆಯೊಂದಿಗೆ ನಗರದ ಕೆಪಿಟಿ ಬಳಿಯ ಉದಯನಗರ ಸುತ್ತಮುತ್ತ
ಸ್ವಚ್ಛತಾ ಅಭಿಯಾನ ನಡೆಸಿದರು.
ಇದೇ ಸಂರ‍್ಭ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ರ‍್ಪಿಸಲಾಯಿತು.
ಈ ಸಂರ‍್ಭ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಯ ಪರಿಕಲ್ಪನೆ ಯೊಂದಿಗೆ ತಾವು ಅಧಿಕಾರ ಸ್ವೀಕರಿಸಿದ ಅವಧಿಯಿಂದ ದೇಶದಾದ್ಯಂತ ಹೊಸ ಕ್ರಾಂತಿಯಲ್ಲಿ ಮಾಡಿದ್ದಾರೆ.
ದೇಶದ ಮೂಲೆ ಮೂಲೆಗಳಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಕ್ತಿಯನ್ನು ತುಂಬಿದ್ದಾರೆ. ಭಾರತೀಯ ಜನತಾ ಪಕ್ಷದ ಕರ‍್ಯರ‍್ತರು ಕಳೆದ 15 ದಿನಗಳಿಂದ ಸೇವಾ ಪಾಕ್ಷಿಕ ಕರ‍್ಯಕ್ರಮದೊಂದಿಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಸಿಕೊಂಡಿದ್ದಾರೆ. ಇಂದು ಉದಯ ನಗರದಲ್ಲಿ ಬಿಜೆಪಿ ಕರ‍್ಯರ‍್ತರು ಸ್ಥಳೀಯ ಮಾನಪಾ ಸದಸ್ಯರಾದ ಜಯಾನಂದ ಅಂಚನ್ ಬಿಜೆಪಿಯ ಪದಾಧಿಕಾರಿಗಳು ಎಲ್ಲರೂ ಸೇರಿ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದಾರೆ.
ದೇಶದ ಭದ್ರತಾ ಪಡೆಯನ್ನ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಅಗ್ನಿವೀರ ಪಡೆಯನ್ನು ಪ್ರಧಾನಿ ಮೋದಿಯವರು ಆರಂಭಿಸಿದ್ದು ಅವರ ಒಂದು ತಂಡ ನಮ್ಮೊಂದಿಗೆ ಸ್ವಚ್ಛತಾ ಕರ‍್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಕರ‍್ಯಕ್ರಮದಲ್ಲಿ ಮಂಗಳೂರು ಉತ್ತರ ಮಂಡಲದ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮಾಜಿ ಮೇಯರ್ ಜಯಾನಂದ ಅಂಚನ್, ಬಿಜೆಪಿ ಪ್ರಮುಖರಾದ ಪೂಜಾ ಪೈ ,ರಣಧೀಪ್ ಕಾಂಚನ್ ಶಾನ್ ವಾಝ್ ಹುಸೈನ್, ರಮೇಶ್, ಮಂಡಲದ ಕರ‍್ಯಾಲಯದ ಕರ‍್ಯರ‍್ಶಿ ಉಮೇಶ್ ಶೆಟ್ಟಿ ಹಾಗೂ ವರ‍್ಡಿನ ಅಧ್ಯಕ್ಷರಾದ ಹರಿಪ್ರಸಾದ್ ಪ್ರಧಾನ ಕರ‍್ಯರ‍್ಶಿ ದಿವ್ಯ ಸುನಿಲ್ ಶಕ್ತಿ ಕೇಂದ್ರದ ಸದಸ್ಯರಾದ ಸರೋಜಿನಿ ಉಪಸ್ಥಿತರಿದ್ದರು.