ಬೆಂಗಳೂರು: 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಮಿನಿ ಸಮರ ಬಿಂಬಿತವಾಗಿದೆ. ಐದು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು ಮೈತ್ರಿ ಗ್ಯಾಮಗ್ ಕಮಲಕ್ಕೆ ನುಂಗಲಾರದ ತುತ್ತನ್ನೇ ಉಣಬಡಿಸಿದೆ.
ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಕೂಟ ಜಯಗಳಿಸುವ ಮೂಲಕ ಬಿಜೆಪಿಗೆ ಶಾಕಿಂಗ್ ಸತ್ಯವನ್ನು ನೀಡಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್.ಆರ್.ಶಿವರಾಮೇಗೌಡ, ಬಳ್ಳಾರಿಯಲ್ಲಿ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಹಾಗೂ ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡ ಕೊರಳಿಗೆ ವಿಜಯಮಾಲೆ ಧರಿಸಿದ್ದು, ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಂಡಿದೆ.
ಬಿಎಸ್‍ವೈ ಪುತ್ರ ರಾಘವೇಂದ್ರ ಪ್ರಯಾಸದ ಗೆಲುವನ್ನು ಸಾಧಿಸಿದ್ದಾರೆ. ಒಟ್ಟಾಗಿ ದೀಪಾವಳಿಯಂದು ರಿಸಲ್ಟ್ ಅನೌನ್ಸ್ ಆಗಿದ್ದು, ಬಿಜೆಪಿ ಪಾಲಿಗೆ ದೀಪಾವಳಿ ಠುಸ್ ಪಟಾಕಿಯಾಗಿದ್ದು ತೆನೆ ಕೈ ಪಕ್ಷಕ್ಕೆ ಬಂಪರ್ ಲಾಬವಾಗಿದೆ.